ಸರ್ವರ ಸಹಭಾಗಿತ್ವದಿಂದ ಕಾರ್ಯಕ್ರಮ ಯಶಸ್ವಿ-ಗುರುಪಾದಶ್ರೀ
ಶಹಾಪುರದಲ್ಲಿ ಜೀವ್ಹೇಶ್ವರ ಜಯಂತ್ಯುತ್ಸವ ಆಚರಣೆ
ಯಾದಗಿರಿ, ಶಹಾಪುರಃ ಜೀವೇಶ್ವರ ಸಾಕ್ಷಾತ್ ಪರಶಿವನ ಜೀವ್ಹಾಗ್ರದಿಂದ ಜನ್ಮಿಸಿದನೆಂಬ ಪ್ರತಿತಿ ಇದ್ದು, ಜೀವ್ಹೇಶ್ವರನನ್ನು ವಸ್ತ್ರ ನಿರ್ಮಿಸುವದಕ್ಕಾಗಿ ಪರಶಿವನು ಈತನನ್ನು ಸೃಷ್ಠಿ ಮಾಡಿದ್ದಾನೆ. ಶಿವನ ಜೀವ್ಹೆಯಿಂದ ಈತ ಜನ್ಮಿಸಿರುವ ಕಾರಣ ಈತನಿಗೆ ಜೀವ್ಹೇಶ್ವರ ಎಂದು ಹೆಸರಿಸಲಾಗಿದೆ ಎಂದು ಸ್ಥಳೀಯ ಫಕಿರೇಶ್ವರ ಮಠದ ಗುರುಪಾದ ಶ್ರೀಗಳು ತಿಳಿಸಿದರು.
ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಜೀವ್ಹೇಶ್ವರ ಜಯಂತ್ಯುತ್ಸವ ಅಂಗವಾಗಿ ಸ್ವಕುಳ ಸಾಳಿ ಸಮಾಜವತಯಿಂದ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವ್ಹೇಶ್ವರನೇ ಮುಂದೆ ಸ್ವ-ಕುಲಕ್ಕೆ ಮುಚ್ಚುವವನು. ಆದ್ದರಿಂದ ಈತನನ್ನು ಸ್ವಕುಳನೆಂದು ಹೆಸರಿಸುವ ಎಂದು ಮರಾಠಿ ಪುಸ್ತಕವೊಂದರಲ್ಲಿ ಉಲ್ಲೇಖವಿದೆ. ಸಮಾಜದ ಈಶ್ವರನ ಆಜ್ಷಾನಾಸುರ ಜನ್ಮಿಸಿದ ಕುಲದೇವಾತ ಪುರುಷನನ್ನು ಸ್ವಕುಳ ಸಾಳಿ ಸಮಾಜ ಜಯಂತಿ ಆಚರಣೆ ಜೊತೆಗೆ ಜೀವ್ಹೇಶ್ವರನ ಕುರಿತಾದ ಇನ್ನಷ್ಟು ಇತಿಹಾಸ ಸಂಗ್ರಹಿಸಿ ಶೋಧಿಸಿ ಆತನ ಪರಿಚಯವನ್ನು ಕನ್ನಡ ಪುಸ್ತಕ ರೂಪದಲ್ಲಿ ಎಲ್ಲರಿಗೂ ದೊರೆಯುವಂತ ಕೆಲಸ ಮಾಡಬೇಕಿದೆ. ಆಗ ಅನ್ಯ ಧರ್ಮಿಯರಿಗೂ ಜೀವ್ಹೇಶ್ವರನ ಬಗ್ಗೆ ತಿಳಿಯಲಿದೆ. ಆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಶೀಘ್ರದಲ್ಲಿ ಆಗಲಿ ಎಂದು ಹಾರೈಸಿದರು.
ಅಲ್ಲದೆ ಇತ್ತೀಚೆಗೆ ಎಲ್ಲಾ ಸಮುದಾಯದವರಿಗೆ ಗುರು ಪೀಠವಿದೆ. ನಿಮ್ಮ ಸಮುದಾಯಕ್ಕೆ ತಡವಾಗಿಯಾದರೂ ಗುರುಪೀಠ ನಿರ್ಮಾಣವಾಗುತ್ತಿರುವುದು ನಿಮ್ಮ ಸಮುದಾಯಕ್ಕೊಬ್ಬರು ಗುರು ದೊರೆಯುತ್ತಿರುವದು ಸಂತಸ ತಂದಿದೆ.
ಆಯಾ ಸಮುದಾಯದಲ್ಲಿ ಗುರು ಒಬ್ಬರೂ ರೂಢಿಯಲ್ಲಿ ಬಂದಾಗ ಆ ಸಮುದಾಯದ ಏಳ್ಗೆಗೆ ಬೆಳವಣಿಗೆ ಪೂರಕವಾಗಲಿದೆ.
ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದಲ್ಲಿ ಸರ್ವರ ಸಹಭಾಗಿತ್ವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸ್ವಕುಳ ಸಾಳಿ ಸಮಾಜ ಯಾವುದೇ ಕಾರ್ಯಕ್ರಮವಾಗಲಿ ಅಚ್ಚುಕಟ್ಟಾಗಿ ಮಾಡುತ್ತಾರೆ. ಎಲ್ಲರೂ ಭಾಗಿಯಾಗುವ ಜೊತೆಗೆ ಜವಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಾರೆ ಹೀಗಾಗಿ ಸಮಾಜ ಆಯೋಜಿಸುವ ಪ್ರತಿ ಕಾರ್ಯಕ್ರಮ ಯಶಸ್ವಿ ಪಡೆಯುತ್ತದೆ. ತಾಲೂಕಿನಲ್ಲಿ ಯಾವುದೇ ಸಮಾಜ ಮಾಡದಂತ ಕಾರ್ಯಕ್ರಮ ಸ್ವಕುಳ ಸಾಳಿ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಸಾಹಿತಿ ಪಂಪಣ್ಣ ಮಾನು, ತಹಶೀಲ್ದಾರ ಸಂಗಮೇಶ ಜಿಡಗೆ ಮತ್ತು ಸಿಪಿಐ ಬಸವಂತ್ರರಡ್ಡಿ ಮಾತನಾಡಿದರು. ಚಬ ಗದ್ದುಗೆಯ ಬಸವಯ್ಯ ಶರಣರು, ನಗರಸಭೆ ಸದಸ್ಯರಾದ ಶರಣಮ್ಮ ಗಣಾಚಾರಿ, ಸಯ್ಯದ್ ಬಾಬಾ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ ಉಪಸ್ಥಿತರಿದ್ದರು. ಸಮಾರಂಭ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳವಹಿಸಿದ್ದರು.
ಹಿರಿಯರಾದ ಮಲ್ಲಯ್ಯ ಫಿರಂಗಿ, ಮಲ್ಲಿಕಾರ್ಜುನ ಚಿಲ್ಲಾಳ, ಸಮಾಜದ ಕಾರ್ಯದರ್ಶಿ ನಾಗೇಂದ್ರ ದಂಡು, ಉಪಾಧ್ಯಕ್ಷ ಸಂತೋಷ ಶಿರವಾಳಕರ್, ನಂದು ಚಿಲ್ಲಾಳ, ರಾಮು ರಹಶೀಲ, ಪ್ರವೀಣ ಫಿರಂಗಿ ಸೇರಿದಂತೆ ಇತರರಿದ್ದರು. ಲಕ್ಷ್ಮೀ ಫಿರಂಗಿ ಮತ್ತು ಸುರೇಖಾ ಏಕಬೋಟೆ ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ವಂದಿಸಿದರು. ಇದೇ ಸಂದರ್ಭದಲ್ಲಿ ಐವರು ಸಾಧಕರನ್ನು ಮತ್ತು ಸಮಾಜದ ಅತ್ಯಂತ ಹಿರಿಯ ಜೀವಿಗಳಿಗೆ ಸತ್ಕರಿಸಲಾಯಿತು.