ಪ್ರಮುಖ ಸುದ್ದಿ

ಸೈಫಿ ಮಸೀದಿಯಲ್ಲಿ‌ ಮೋದಿ‌ ಭಾಷಣ

ಸೈಫಿ ಮಸೀದಿಯಲ್ಲಿ‌ ಮೋದಿ‌ ಮಾತು

ಇಂದೋರಃ ನಮ್ಮ ದೇಶ ವಿವಿಧತೆಯಲ್ಲಿ ಜಗತ್ತಿಗೆ ಮಾದರಿ. ನನಗೆ ಇತಿಹಾಸದ ಬಗ್ಗೆ ಹೆಮ್ಮೆ ಇದೆ. ಭವಿಷ್ಯದ ಬಗ್ಗೆ ವಿಶ್ವಾಸವಿದೆ ಎಂದು‌ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನಗರದ ಸೈಫಿ ಮಸೀದಿಯಲ್ಲಿ ಬೋಹ್ರಾ ಸಮುದಾಯ ಆಯೋಜಿಸಿದ್ದ ಮುಸ್ಲಿಂ ಧಾರ್ಮಿಕ‌ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ‌ ಅವರು ಮಾತನಾಡಿದರು.

ದಂಡಿಯಾತ್ರೆ ಸಂದರ್ಭ ಗಾಂಧೀಜಿ ಬೊಹ್ರಾ ಮಸೀದಿಯಲ್ಲಿ‌ ಉಳಿದುಕೊಂಡಿದ್ದರು ಎಂದು ನೆನಪಿಸಿದರು. ಆ ಸಂದರದಭ ದಾವೋದಿ ಬೊಹ್ರಾ ಸಮುದಾಯ ಗಾಂಧಿಜೀಯವರ ಶಾಂತಿಯುತ ಹೋರಾಟವನ್ನು ಬೆಂಬಲಿಸಿದ್ದರು.

ಬೊಹ್ರಾ ಸಮುದಾಯದ ಜೊತೆ ನನ್ನದು ಹಳೇ ಸಂಬಂಧ. ಗಾಂಧಿ‌ಜೀ ಜೊತೆ ಬೊಹ್ರಾ ಸಮುದಾಯ ಶಾಂತಿಯುತ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಬೊಹ್ರಾ ಸಮುದಾಯ ಎಲ್ಲಾ ಸಮಯದಲ್ಲೂ ಬೆಂಬಲಿಸಿದೆ.
ಭಾರತದ ಯಾವುದೇ ವ್ಯಕ್ತಿ ಹಸಿವಿನಿಂದ ಮಲಗಬಾರದು.

ಪ್ರತಿ ವ್ಯಕ್ತಿಯ ಆರೋಗ್ಯ ಸುಧಾರಣೆಗಾಗಿ ಆಯುಷ್ಮಾನ ಆರೋಗ್ಯ ಯೋಜನೆ ಜಾರಿಗೊಳಿಸಲಾಗಿದೆ.

ಪ್ರತಿ ಮಗೂವಿಗೂ ಶಿಕ್ಷಣ, ಆರೋಗ್ಯ ಪೋಷಣೆ ಅಗತ್ಯ. ಆ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದು, ಅಭಿಯಾನ ಕೈಗೊಳ್ಳಲಾಗಿದೆ.

ಇಮಾಮ ಹುಸೇನರ ಜೀವನ ಸಂದೇಶ ನಮಗೆ ಆದರ್ಶ. ಇಮಾಮ್ ಹುಸೇನ್ ಅನ್ಯಾಯ ಅಹಂಕಾರದ ವಿರುದ್ಧ ಇದ್ದರು. ಅವರ ಜೀವನ‌ ನಮಗೆಲ್ಲ ಆದರ್ಶವಾಗಿದೆ. ಬೊಹ್ರಾ ಸಮುದಾಯದ ಪ್ರೀತಿ ವಿಶ್ವಾಸ ಅವರ ಆಶೀರ್ವಾದ ‌ಯಾವಗಲೂ ನನ್ನ ಜೊತೆ‌ ಹಾಗೇ ಮುಂದೆಯು ಇರಲಿದೆ‌. ಅವರಿಗೆ ತುಂಬು ಹೃದಯದ ಕೃತಜ್ಞತೆಗಳು ಸಹ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ‌ ಚವ್ಹಾಣ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button