ನಿಮ್ಮ ಜೀವನದುದ್ದಕ್ಕೂ ಇರುವವರಾರು.? ಈ ಅದ್ಭುತ ಕಥೆ ಓದಿ
ದಿನಕ್ಕೊಂದು ಕಥೆ
ಒಂದಿನ….
ದೊಡ್ಡವರಿಗೆ ಏರ್ಪಡಿಸಿದ್ದ ಮನೋಶಾಸ್ತ್ರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಮನಶಾಸ್ತ್ರ ಶಿಕ್ಷಕ ‘ ಇವತ್ತು ಒಂದು ಆಟ ಆಡೋಣ ‘ ಎನ್ನುತ್ತಾನೆ.
‘ ಯಾವ ಆಟ ? ‘
ವಿದ್ಯಾರ್ಥಿನಿಯೊಬ್ಬಳಿಗೆ ಬರಲು ಹೇಳುತ್ತಾನೆ ಶಿಕ್ಷಕ.
ಹೇಮಾ ಎಂಬ ಹೆಣ್ಣುಮಗಳು ಎದ್ದು ಬರುತ್ತಾಳೆ.
ನಿನ್ನ ಜೀವನದಲ್ಲಿ ತುಂಬಾ ಮುಖ್ಯ ಅನಿಸುವ 30 ಜನರ ಹೆಸರುಗಳನ್ನು ಬೋರ್ಡ್ ಮೇಲೆ ಬರಿ ಎಂದ ಶಿಕ್ಷಕ.
ಹೇಮಾ 30 ಹೆಸರು ಬರೆದಳು.
ಅದರಲ್ಲಿ ….
ಆಕೆಯ ಕುಟುಂಬದ ಸದಸ್ಯರು, ಸಂಬಂಧಿಕರು, ಗೆಳೆಯ-ಗೆಳತಿಯರು, ಸಹೋದ್ಯೋಗಿಗಳು ಹಾಗೂ ನೆರೆಹೊರೆಯವರ ಹೆಸರುಗಳಿದ್ದವು.
‘ ಇವುಗಳ ಪೈಕಿ ಯಾವುದಾದರೂ ಮೂರನ್ನು ಅಳಿಸು ‘.
ಆಕೆ ತನ್ನ ಸಹೋದ್ಯೋಗಿಗಳ ಹೆಸರು ಅಳಿಸಿದಳು.
‘ ಮುಖ್ಯ ಅನಿಸದ ಐದು ಹೆಸರುಗಳನ್ನು ಅಳಿಸು ‘
ತನ್ನ ನೆರೆಹೊರೆಯವರ ಹೆಸರುಗಳನ್ನು ಅಳಿಸಿದಳು ಹೇಮಾ.
ಹೀಗೆ ಅಳಿಸುವ ಕೆಲಸ ಮುಂದುವರೆದು, ಕೊನೆಗೆ ಕೇವಲ ನಾಲ್ಕು ಹೆಸರುಗಳು ಮಾತ್ರ ಬೋರ್ಡ್ ಮೇಲೆ ಉಳಿದವು.
ಅವು…
ಹೇಮಾಳ ತಂದೆತಾಯಿ, ಗಂಡ ಮತ್ತು ಮಗನದಾಗಿತ್ತು.
ಇಷ್ಟೊತ್ತಿಗೆ ಇಡೀ ಕ್ಲಾಸು ಸ್ತಬ್ಧವಾಗಿತ್ತು.
ಏಕೆಂದರೆ…
ಈ ಅಳಿಸುವ ಆಟ ಕೇವಲ ಹೇಮಾಳೊಬ್ಬಳಿಗೇ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿತ್ತು.
ಈಗ…
ಶಿಕ್ಷಕ ಪ್ರಮುಖ ಅನಿಸದ ಇನ್ನೆರಡು ಹೆಸರು ಅಳಿಸಲು ಹೇಳಿದ.
ಇದು ನಿಜಕ್ಕೂ ಸವಾಲಿನದಾಗಿತ್ತು.
ಅತ್ಯಂತ ಕಷ್ಟದಿಂದ ಹೇಮಾ ತನ್ನ ತಂದೆತಾಯಿಗಳ ಹೆಸರುಗಳನ್ನು ಅಳಿಸಿದಳು.
ಉಳಿದಿದ್ದು ಗಂಡ ಮತ್ತು ಮಗನ ಹೆಸರುಗಳು ಮಾತ್ರ.
‘ ದಯವಿಟ್ಟು ಹೇಮಾ, ಇನ್ನೊಂದು ಹೆಸರನ್ನೂ ಅಳಿಸಿ ‘
ನಿಸ್ತೇಜಳಾದಳು ಹೇಮಾ.
ಕೈಗಳು ನಡುಗಲಾರಂಭಿಸಿದವು. ಕಣ್ಣುಗಳು ತುಂಬಿ ಬಂದವು. ಅಳುತ್ತಲೇ ಆಕೆ ತನ್ನ ಮಗನ ಹೆಸರನ್ನು ಅಳಿಸಿದಳು. ನಂತರ ಜೋರಾಗಿ ಅತ್ತುಬಿಟ್ಟಳು.
ಹೇಮಾಳನ್ನು ಆಕೆಯ ಸೀಟ್‍ನಲ್ಲಿ ಕೂಡಲು ಹೇಳಿದ ಶಿಕ್ಷಕ ತರಗತಿ ಉದ್ದೇಶಿಸಿ ಕೇಳಿದ: ‘ನಿನ್ನ ಗಂಡನ ಹೆಸರನ್ನಷ್ಟೇ ಏಕೆ ಉಳಿಸಿಕೊಂಡೆ ? ತಂದೆತಾಯಿ ನಿನಗೆ ಜನ್ಮವಿತ್ತು, ಸಾಕಿ ಸಲಹಿದವರು. ಇನ್ನು ಒಬ್ಬ ಮಗನಿಗೆ ನೀನೇ ಜನ್ಮವಿತ್ತಿದ್ದೀ. ಅವರ್ಯಾರೂ ನಿನಗೆ ಮತ್ತೆ ಸಿಗುವವರಲ್ಲ. ಆದರೆ, ಬೇಕೆಂದರೆ ಬೇರೊಬ್ಬನನ್ನು ನೀನು ಗಂಡನನ್ನಾಗಿ ಮಾಡಿಕೊಳ್ಳುವ ಅವಕಾಶ ಇದ್ದೇ ಇದೆ ‘.
ಇಡೀ ತರಗತಿ ಉಸಿರು ಬಿಡದೇ ಹೇಮಾಳ ಉತ್ತರಕ್ಕಾಗಿ ಕಾಯುತ್ತಿತ್ತು.
ಹೇಮಾ ಶಾಂತಳಾಗಿ, ನಿಧಾನವಾಗಿ ಉತ್ತರಿಸಿದಳು:
‘ ಒಂದಿನ ತಂದೆತಾಯಿ ನನ್ನನ್ನು ಬಿಟ್ಟು ಹೋಗುವರು.
‘ಮಗ ಕೂಡ ದೊಡ್ಡವನಾದ ಮೇಲೆ ತನ್ನ ಓದು, ಕೆಲಸ ಅಥವಾ ಇತರ ಕಾರಣಗಳಿಗಾಗಿ ನನ್ನನ್ನು ಬಿಟ್ಟು ಹೋಗಬಹುದು.
‘ಆದರೆ, ಗಂಡ ಜೀವನದುದ್ದಕ್ಕೂ ನನ್ನ ಜೊತೆಗೇ ಇರುವವನು ‘.
ಇಡೀ ತರಗತಿ ಎದ್ದು ನಿಂತು ಚಪ್ಪಾಳೆ ತಟ್ಟಿತು.
ಇದೇ ಜೀವನದ ಸತ್ಯ.
ಆದ್ದರಿಂದ…
ನಿಮ್ಮ ಸಂಗಾತಿಯೇ ಮುಖ್ಯ.
ಇದು ಹೆಂಡತಿಯರಿಗಷ್ಟೇ ಅಲ್ಲ, ಗಂಡಂದಿರಿಗೂ ಅನ್ವಯಿಸುತ್ತದೆ…
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882