ನಟ ಕಿಚ್ಚ ಸುದೀಪ್ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು!
ಬೆಂಗಳೂರು: ನಟ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ಧಾರವಾಹಿ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನ ಕಾಫಿ ತೋಟವನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದೃ, ಚಿತ್ರೀಕರಣದ ಬಳಿಕ ಬಾಡಿಗೆ ನೀಡದೆ ವಂಚಿಸಲಾಗಿದೆ ಎಂದು ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಫಿಲ್ಮ್ ಚೇಂಬರ್ ಗೆ ದೂರುನೀಡಿದ್ದಾರೆ. ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ವಂಚನೆ ಆರೋಪ ಹೊರಿಸಿ ದೂರು ನೀಡಿದ್ದಾರೆ.
ಧಾರವಾಹಿ ಚಿತ್ರೀಕರಣ ಸಂದರ್ಭದಲ್ಲಿ ಕಾಫಿ ತೋಟದಲ್ಲಿ ಬೆಳೆ ಹಾನಿ ಆಗಿದೆ. ಅಲ್ಲದೇ ಸಾಕಷ್ಟು ನಷ್ಟವೂ ಸಂಭವಿಸಿದೆ. ಆದರೆ, ಅತ್ತ ಕಾಫಿ ತೋಟದಲ್ಲಿ ಬೆಳೆಯೂ ಇಲ್ಲ, ಇತ್ತ ಬಾಡಿಗೆ ಹಣವು ಇಲ್ಲ ಎಂಬಂತಾಗಿದೆ ಎಂದು ದೀಪಕ್ ದೂರಿದ್ದಾರೆ. ಈ ಬಗ್ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ನಟ ಸುದೀಪ ಯಾವ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದನ್ನಿ ಕಾದು ನೋಡಬೇಕಿದೆ. ಧಾರವಾಹಿ ನಿರ್ಮಾಣ ಹಂತದಲ್ಲೇ ಕಿಚ್ಚ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದಿಂದ ಹಿಂದೆ ಸರಿದಿತ್ತು ಎನ್ನಲಾಗುತ್ತಿದೆ. ದೀಪಕ್ ಎಂಬುವರಿಂದ ದೂರು ಸ್ವೀಕರೊಸಿರುವ ಫಿಲ್ಮ ಚೇಂಬರ್ ಅದ್ಯಕ್ಷ ಚಿನ್ನೇಗೌಡ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.