ಪ್ರಮುಖ ಸುದ್ದಿ
ಯಾದಗಿರಿಃ ಯುವಕನೋರ್ವನ ಸಂಶಯಾತ್ಮಕ ಸಾವು
ಯುವಕನೋರ್ವನ ಸಂಶಯಾತ್ಮಕ ಸಾವು
ಯಾದಗಿರಿಃ ಯುವಕನೋರ್ವ ಗಿಡವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಬಸವಂತಪುರ ಗ್ರಾಮ ಸಮೀಪ ಹಯ್ಯಾಳ(ಕೆ) ಸೀಮಾಂತರದಲ್ಲಿ ಬರುವ ಹೊಲಗಳಿಗೆ ತೆರಳುವ ರಸ್ತೆ ಮಧ್ಯದಲ್ಲಿ ನಡೆದಿದೆ.
ಹಳ್ಳೆಪ್ಪ ಪುರಂದರ ದಾಸರ (23) ಮೃತ ದುರ್ದೈವಿ. ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ಕೇಳಿ ಬರುತ್ತಿದ್ದು, ಇದು ಆತ್ಮಹತ್ಯೆ ವಲ್ಲ ಕೊಲೆ ಶಂಕೆ ವ್ಯಕ್ತಪಡಿಸುತ್ತಿದ್ದು, ಪೊಲೀಸರ ತನಿಖೆ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಚಂದ್ರಕಾಂತ ಮೆಕಾಲೆ ಪರಿಶೀಲನೆ ನಡೆಸಿ, ಯುಡಿಆರ್ ನಡಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.