ಯಡಿಯೂರಪ್ಪ ಅಂತೊಬ್ಬ ಇದ್ದಾನೆ… -ಸಿಎಂ ವಾಗ್ದಾಳಿ
ಈಶ್ವರಪ್ಪ ಬುದ್ಧಿಹೀನ, ಹೆಗಡೆಗೆ ಸಂಸ್ಕಾರವೇ ಗೊತ್ತಿಲ್ಲ- ಸಿಎಂ
ಎರಡು ಬಾರಿ ಸಿಎಂ ಆಗ್ತಿದ್ದೆ..ತಪ್ಸಿದ್ದು ಯಾರ್ ಗೊತ್ತಾ..?
ಮಂಡ್ಯಃ ನಾನು 1996 ಮತ್ತು 2004 ರಲ್ಲಿ ಎರಡು ಬಾರಿ ಸಿಎಂ ಆಗಬೇಕಿತ್ತು. ಆಗ ಸಾಕಷ್ಟು ಶಾಸಕರು ನನ್ನ ಜೊತೆಯಲ್ಲಿದ್ದರು. ಆವಾಗಿನಿಂದ ನನ್ನ ಸಿಎಂ ಆಗುವುದನ್ನು ತಪ್ಸಿದ್ರು. ಅಲ್ದೆ ನನ್ನನ್ನು ಪಕ್ಷದಿಂದ ಹೊರಹಾಕಲಾಯಿತು. ಹೀಗಾಗಿ ನಾನು ಜೆಡಿಎಸ್ ನಲ್ಲಿ ಇದ್ದಿದ್ರೆ ಸಿಎಂ ಆಗುತಿರಲಿಲ್ಲ. ಕಾಂಗ್ರೆಸ್ ಪಕ್ಷ ನನಗೆ ಸಿಎಂ ಆಗುವ ಅವಕಾಶ ಕಲ್ಪಿಸಿದೆ ಎಂದು ಸಿಎಂ ಸಿದ್ರಾಮಯ್ಯ ಹೇಳಿದರು.
ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು. ಸಿಎಂ ಆದೆ, ಐದು ವರ್ಷವು ಪೂರೈಸಿದೆ. ಮತ್ತೆ ಸಿಎಂ ಆಗಿ ಬಿಡುತ್ತೇನೆ ಎಂಬ ಹೊಟ್ಟೆ ಉರಿ ಅವಕ್ಕಿದೆ ಎಂದು ವಿಪಕ್ಷ ನಾಯಕರಿಗೆ ಕುಟುಕಿದರು. ಜೆಡಿಎಸ್ ನಲ್ಲಿದ್ದಾಗ ನನ್ನನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದಾಗ ಜೆಡಿಎಸ್ ನವರು ತಪ್ಪಿಸಿದ್ರು ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೆಗೌಡರ ಮೇಲೆ ಹರಿದಾಯ್ದರು.
ಯಡಿಯೂರಪ್ಪ ಅಂತ ಒಬ್ಬ ಇದ್ದಾನೆ. ಅವನಿಗೆ ಬುದ್ಧಿ ಇದಿಯೋ, ಇಲ್ಲವೋ ಗೊತ್ತಿಲ್ಲ. ಅಲ್ದೆ ಈಶ್ವರಪ್ಪ ಅಂತೂ..ಬುದ್ಧಿಹೀನ ಅವನು ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಇನ್ನೂ ಉತ್ತರ ಕರ್ನಾಟಕದಲ್ಲೊಬ್ಬ ಅನಂತಕುಮಾರ ಹೆಗಡೆ ಅವನಿಗೋ ಸಂಸ್ಕೃತಿ, ಸಂಸ್ಕಾರ ಏನು ಇಲ್ಲಾ. ರಾಜಕೀಯ ಭಾಷೆ ಗೊತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಿಎಂ ತೀವ್ರ ವಾಗ್ದಾಳಿ ನಡೆಸಿದರು.
ಮತ್ತು ನನಗೂ ಹಳ್ಳಿ ಭಾಷೆಯಲ್ಲಿ ಬೈಯುವುದು ಚನ್ನಾಗಿ ಗೊತ್ತು. ಆದರೆ ಅವರ ಮಟ್ಟಕ್ಕೆ ನಾನು ಇಳಿದು ಮಾತನಾಡಲ್ಲ ಎಂದು ತಮ್ಮ ಎಂದಿನ ಗತ್ತಿನಲ್ಲೇ ಹೇಳಿದರು.