ಪ್ರಮುಖ ಸುದ್ದಿ
ಅತೃಪ್ತ ಶಾಸಕರಿಂದ ವಿಪ್, ನೋಟಿಸ್ ಗಳಿಗೆ ಡೌಂಟ್ ಕೇರ್!
ಬೆಂಗಳೂರು: ಮುಂಬೈ ಸೇರಿರುವ ಶಾಸಕರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ವಿಪ್ ಜಾರಿ ಮಾಡುವ ಅಸ್ತ್ರ ಬಳಸಿದರೂ ಸೊಪ್ಪು ಹಾಕದೆ ದೋಸ್ತಿ ಸರ್ಕಾರ ಪತನದ ಬಳಿಕ ವಾಪಸ್ ಬರುತ್ತೇವೆ ಎಂದು ಅತೃಪ್ತರು ಹೇಳಿದ್ದಾರೆ. ಮೈತ್ರಿ ಸರ್ಕಾರ ಪತನವಾದ ಬಳಿಕವೇ ಬೆಂಗಳೂರಿಗೆ ಬರುತ್ತೇವೆ ಎಂದು ಅತೃಪ್ತ ಶಾಸಕರು ಪತ್ರದ ಮೂಲಕ ಸ್ಪೀಕರ್ ಗೆ ಉತ್ತರ ನೀಡಿದ್ದಾರೆ. ಅತೃಪ್ತ ಶಾಸಕರ ಪರವಾಗಿ ವಕೀಲರು ಆಗಮಿಸಿ ಸಮಯ ಅವಕಾಶ ಕೇಳಿ ಮನವಿ ಮಾಡಿದ್ದಾರೆ.
ರಾಜೀನಾಮೆ ನೀಡಿ ಮುಂಬೈನಲ್ಲಿರುವ ಶಾಸಕರು ಸ್ಪೀಕರ್ ನೊಟೀಸ್ ಬಳಿಕ ಕೂಡ ಬೆಂಗಳೂರಿಗೆ ಬರಲು ಒಪ್ಪಿಕೊಂಡಿಲ್ಲ. ನಾಲ್ಕು ದಿನ ಕಾಲಾವಕಾಶ ನೀಡಿ ಎಂದು ಮನವಿ ಮಾಡಿರುವ ಅತೃಪ್ತ ಶಾಸಕರು, ನಾವು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ