ಪ್ರಮುಖ ಸುದ್ದಿ

ವಕೀಲರ ಅನಿರ್ಧಿಷ್ಟ ಮುಷ್ಕರಕ್ಕೆ ಕರವೇ ಬೆಂಬಲ

ಯಾದಗಿರಿ ಜಿಲ್ಲೆ ಅಭಿವೃದ್ಧಿ ಮರೀಚಿಕೆ ಗದ್ದುಗೆ ಆಕ್ರೋಶ

ಯಾದಗಿರಿಃ ನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಿಸಲು ಸ್ಥಳವಕಾಶ ಕಲ್ಪಿಸಬೇಕೆಂದು ಸ್ಥಳೀಯ ನ್ಯಾಯವಾದಿಗಳ ಸಂಘದ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಅನಿರ್ಧಿಷ್ಟ ಮುಷ್ಕರ ಮುಂದುವರೆದಿದೆ.

ಹೀಗಾಗಿ ಇಂದು ವಕೀಲರು ನಡೆಸುತ್ತಿದ್ದ ಧರಣಿ ಬೆಂಬಲಿಸಿ ಕರವೇ ಉಕ ಅಧ್ಯಕ್ಷ ಶರಣು ಬಿ.ಗದ್ದುಗೆ ನೇತೃತ್ವದಲ್ಲಿ ನಗರದ ಹಳೆ ಬಸ್ ನಿಲ್ದಾಣದಿಂದ ಪ್ರತಿಭಟನೆ ಹೊರಟು ವಕೀಲರು ನಡೆಸುತ್ತಿದ್ದ ಧರಣಿಯಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಜಿಲ್ಲೆಗೆ ನ್ಯಾಯವಾದಿಗಳ ಸಂಕೀರ್ಣ ಅಗತ್ಯವಿದೆ. ಆ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸಮರ್ಪಕವಾದ ಸ್ಥಳ ಒದಗಿಸಬೇಕು. ಮತ್ತು ಸಂಕೀರ್ಣ ನಿರ್ಮಾಣಕ್ಕೆ ಸಮರ್ಪಕ ಅನುದಾನ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಯಾದಗಿರಿ ನೂತನ ಜಿಲ್ಲೆಯಾಗಿ 7 ವರ್ಷಗಳೇ ಗತಿಸಿದರೂ, ಸಹ ಸರ್ಕಾರ ಹಿಂದುಳಿದ ಯಾದಗಿರಿ ಜಿಲ್ಲೆ ಅಭಿವೃದ್ಧಿಗೆ ಬಗ್ಗೆ ಕಿಂಚಿತ್ತೂ ಗಮನಹರಿಸುತ್ತಿಲ್ಲ ಎಂದು ವಿಷಾಧಿಸಿದರು. ಅಲ್ಲದೆ ಮೈಸೂರ ಮತ್ತು ಬೆಂಗಳೂರ ಭಾಗದವರಿಗೆ ಕರ್ನಾಟಕದಲ್ಲೊಂದು ಯಾದಗಿರಿ ಎನ್ನುವ ಪುಟ್ಟ ಜಿಲ್ಲೆ ಇದೆ ಎಂಬುದು ಬಹುಷ ಅವರು ಮರೆತಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಜಿಲ್ಲೆಗೆ ಮಹಿಳಾ ಪೊಲೀಸ್ ಠಾಣೆ, ಸಂಚಾರಿ ಠಾಣೆಗಳನ್ನು ಜಿಲ್ಲೆಗೆ ಒದಗಿಸುವಂತೆ ಹೋರಾಟ ನಡೆಸುವ ಮೂಲಕ ಇವುಗಳನ್ನು ಪಡೆಯವಂತಾಯಿತು ಎಂದು ವಿಷಾಧಿಸಿದರು. ಇನ್ನೂ ಯಾದಗಿರಿ ಗಡಿ ಜಿಲ್ಲೆ ಸರ್ಕಾರ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಹಿಂದುಳಿದ ಗಡಿ ಭಾಗದ ಈ ಜಿಲ್ಲೆಗೆ ವಿಶ್ವವಿದ್ಯಾಲಯದಂತಹ ಶೈಕ್ಷಣಿಕ ಕೇಂದ್ರ ಮಂಜೂರಿ ಅಗತ್ಯವಿದೆ. ಇಂತಹ ಮಹತ್ವದ ಕೆಲಸಗಳು ಆಗಬೇಕಿದೆ.

ಈ ನಿಟ್ಟಿನಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣವು ಅಗತ್ಯವಿದೆ ಕೂಡಲೇ ಸರ್ಕಾರ ಜಿಲ್ಲೆಗೆ ಬೇಕಾದ ಮಹತ್ವದ ಅಗತ್ಯದ ಸೌಲಭ್ಯಗಳನ್ನು ಕೂಡಲೇ ಕರುಣಿಸಬೇಕು ಇಲ್ಲವಾದಲ್ಲಿ ಕನ್ನಡಪರ ಸಂಘಟನೆಗಳು ಸಹ ರಸ್ತೆಗಿಳಿದು ಹೋರಾಟ ಮಾಡಲಿವೆ ಎಂದು ಅವರು ಎಚ್ಚರಿಸಿದರು. ಶಾಸ್ತ್ರೀ ವೃತ್ತದಿಂದ ಪ್ರತಿಭಟನೆ ಮೆರವಣಿಗೆ ಹೊರಟ ಕರವೇ ವಕೀಲರ ಧರಣಿ ಸ್ಥಳ ತಲುಪಿತು. ಧರಣಿಯಲ್ಲಿ ಭಾಗಿವಹಿಸುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button