ಕೋವಿಡ್ ಡ್ಯೂಟಿಃ ದೂರದಿಂದಲೇ ತನ್ನ ಮಗಳ ಮುಖ ನೋಡಿದ ಶಿಕ್ಷಣ ಸಚಿವರ ಮಗಳು ಡಾ.ದಿಶಾ.!
ಕೋವಿಡ್ ಡ್ಯೂಟಿಃ ದೂರದಿಂದಲೇ ತನ್ನ ಮಗಳ ಮುಖ ನೋಡಿದ ಶಿಕ್ಷಣ ಸಚಿವರ ಮಗಳು ಡಾ.ದಿಶಾ.!
ವಿವಿ ಡೆಸ್ಕ್ಃ ಕೋವಿಡ್ ಡ್ಯೂಟಿಯಲ್ಲಿರುವ ರಾಜ್ಯದ ಶಿಕ್ಷಣ ಸಚಿವ ಸುರೇಶಕುಮಾರ ಅವರ ಮಗಳು ಡಾ.ದಿಶಾ ತನ್ನ ಮಗಳನ್ನು ದೂರದಿಂದಲೇ ನೋಡಿ ಮಾತಾಡಿಸಿ ಮತ್ತೇ ಕೋವಿಡ್ ಡ್ಯೂಟಿಗೆ ಹಾಜರಾದ ಹೃದಯ ಹಿಂಡುವ, ಡಾ.ದಿಶಾ ತನ್ನ ಮಗುವನ್ನು ಮನೆಯ ಹೊರಗಡೆಯಿಂದಲೇ ನೋಡುತ್ತಿರುವ ದೃಶ್ಯ ಕಂಡು ಮನಕಲುಕುವದು ಸಹಜ.
ಹೌದು..ಶಿಕ್ಷಣ ಸಚಿವರ ಮಗಳು ಡಾ.ದಿಶಾ ತನ್ನ ಮಗುವನ್ನು ಅಂದರೆ ಸಚಿವರ ಮೊಮ್ಮಗುವನ್ನು ಸಚಿವರ ಪತ್ನಿಯೇ ಹಾರೈಕೆ ಮಾಡುತ್ತಿದ್ದಾರೆ. ಸದ್ಯ ಮಗಳು ಡಾ.ದಿಶಾ ಕೋವಿಡ್ ಹಿನ್ನೆಲೆ ತಮ್ಮ ವೃತ್ತಿಯಲ್ಲಿ ನಿರತರಾಗಿದ್ದು, ಕೊರೊನಾ ಸೋಂಕಿತರ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇತ್ತ ಅವರ ಮಗು ಅಜ್ಜ-ಅಜ್ಜಿಯ ಹಾರೈಕೆ ಪ್ರೀತಿಯಲ್ಲಿ ಕಾಲ ಕಳೆಯುತ್ತಿದೆ. ಮಗು ತನ್ನ ತಾಯಿಯನ್ನು ಕೇಳಿದಾಗಲೆಲ್ಲ ಆ ಕೊರತೆ ನೀಗಿಸುವಲ್ಲಿ ಸಚಿವರ ಪತ್ನಿ ಹರಸಾಹಸ ಪಡುತ್ತಿದ್ದಾರೆ ಎನ್ನಲಾಗಿದೆ.
ಡಾ.ದಿಶಾ ಮಗುವನ್ನು ಮನೆ ಹೊರಗಡೆ ನಿಂತು ಮಾತಾಡಿಸುತ್ತಿರುವ ಚಿತ್ರವನ್ನು ಸಚಿವ ಸುರೇಶಕುಮಾರ ಟ್ವಿಟರ್ ಮೂಲಕ ತಿಳಿಸಿದ್ದು, ಸಾವಿರಾರು ಮಂದಿ ಲೈಕ್ ಕೊಟ್ಟಿದ್ದು, ಕೊರೊನೊ ವಾರಿಯರ್ಸ್ ಡಾ.ದಿಶಾಗೆ ಹ್ಯಾಟ್ಸಪ್ ಹೇಳಿದ್ದಾರೆ.