ಪ್ರಮುಖ ಸುದ್ದಿ
ಲಾಕ್ ಡೌನ್ ಸಂಡೆಃ ಶಹಾಪುರ ನಿಶ್ಯಬ್ಧ
ಲಾಕ್ ಡೌನ್ಃ ಶಹಾಪುರ ನಿಶ್ಯಬ್ಧ
ಯಾದಗಿರಿಃ ಕೊರೊನಾ ಮಹಾಮಾರಿ ತಡೆಗೆ ಬಾನುವಾರ ದಿನ ಪೂರ್ಣ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆ ಯಾದಗಿರಿ, ಶಹಾಪುರ, ಸುರಪುರ ನಗರಗಳಲ್ಲಿ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಆಗಿದ್ದು, ವಾಹನ ಸಂಚಾರವು ವಿರಳವಾಗಿದೆ.
ಶಹಾಪುರ ನಗರ ಸೇರಿದಂತೆ ಜಿಲ್ಲೆ ಬಣಬಣ ಅನಿಸುತ್ತಿದೆ. ಬಸ್ ಸಂಚಾರವು ಸ್ಥಗಿತಗೊಳಿಸಿದ ಹಿನ್ನೆಲೆ ಶಹಾಪುರ ಬಸ್ ನಿಲ್ದಾಣದಲ್ಲಿ ನರಪಿಳ್ಳೆಯು ಕಾಣದೆ ಬಿಕೋ ಎನ್ನುತ್ತಿದೆ.
ನಾಳೆ ಅಂದ್ರೆ ಸೋಮವಾರ ಬೆಳಗ್ಗೆಯೇ ನಿಯಮನುಸಾರ ಮಾರುಕಟ್ಟೆ ಒಪನ್ ಆಗಲಿದೆ. ಕೊರೊನಾ ತೀವ್ರತೆ ತಗ್ಗಿಸಲು ಸರ್ಕಾರ ಈ ಕ್ರಮಕೈಗೊಂಡಿದೆ ಎನ್ನಲಾಗಿದೆ.