ಕಲಬುರ್ಗಿಃ ಏಷನ್ ಪ್ಲಾಜಾ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ ಅಪಾರ ಪ್ರಮಾಣದ ಹಾನಿ
ಕಲಬುರ್ಗಿಃ ಏಷನ್ ಪ್ಲಾಜಾ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ ಅಪಾರ ಪ್ರಮಾಣದ ಹಾನಿ
ಕಲಬುರ್ಗಿಃ ನಗರದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿರುವ ಏಷ್ಯನ್ ಪ್ಲಾಜದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿ ಉರಿಯುತ್ತಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದೆ ಎನ್ನಲಾಗಿದೆ. ಪಕ್ಕದ ಬಿಲ್ಡಿಂಗ್ ಗಳಿಗೂ ಬೆಂಕಿ ಕೆನ್ನಾಲಿಗೆ ವ್ಯಾಪಿಸುತ್ತಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಬೆಂಕಿ ಉರಿಗೆ ಬಿಲ್ಡಿಂಗ್ ನಲ್ಲಿದ್ದ ಪಕ್ಷಿ ಇತರೆ ಕ್ರಿಮಿಕೀಟಗಳು ಸುಟ್ಟು ಕರಕಲಾಗಿವೆ. ಖಾನ್ ಕಪಡಿಯಂತ ಪಕ್ಷಿಗಳು, ಇಲಿಗಳು ಬೆಂಕಿಗೆ ಸುಟ್ಟು ಕರಕಲಾದ ದೃಶ್ಯಗಳು ನೋಡುಗರ ಮನ ಘಾಸಿಗೊಳಿಸಿದೆ.
ಬೆಂಕಿ ನಂದಿಸಲು ನಾಗರಿಕರು ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಸಹಕಾರ ನೀಡುತ್ತಿದ್ದಾರೆ. ಬೆಂಕಿ ಕೆನ್ನಾಲೆ ಅಪಾರವಾಗಿದೆ. ಕಟ್ಟಡದಲ್ಲಿರುವ ಎರಡು ಮೂರು ಅಂಗಡಿಗಳಿಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಲಕ್ಷಾಂತರ ರೂಪಾಯಿ ಸಾಮಾಗ್ರಿಗಳು, ಬೆಲೆಬಾಳುವ ವಸ್ತುಗಳು ಸುಟ್ಟ ಪರಿಣಾಮ ಅಪಾರ ಹಾನಿ ಸಂಭವಿಸುವ ಲಕ್ಷಣ ಕಂಡು ಬರುತ್ತಿದೆ.
ಇಡೀ ಬಿಲ್ಡಿಂಗ್ ಹೊಗೆ ಆವರಿಸಿದ್ದು, ಬೆಂಕಿಯ ಶಾಖವು ಜೋರಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಹಾಗೇ ಕಷ್ಟಪಟ್ಟು ಒಳ ನುಗ್ಗುವ ಮೂಲಕ ಬೆಂಕಿ ನಂದಿಸಲು ಶ್ರಮ ಪಡುತ್ತಿದ್ದಾರೆ. ಅಪಾರ ಪ್ರಮಾಣ ನಷ್ಟ ಸಂಭಿವಿಸಿದ್ದು, ಬೆಂಕಿ ಸಂಪೂರ್ಣ ನಂದಿದೆ ನಂತರವೇ ನಷ್ಟದ ಲೆಕ್ಕ ದೊರೆಯಲಿದೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.