ಕೋವಿಡ್ ಟೆಸ್ಟ್ ಗೆ ಕಕ್ಷಿದಾರರೇ ಮುಂದಾಗುತ್ತಿರುವದು ಸಂತಸ
ಕೊರೊನಾ ಹಾವಳಿ ನಡುವೆ ಜೀವನ ಸಾಗಿಸುತ್ತಿದ್ದೇವೆ-ದೇಸಾಯಿ
yadgiri, ಶಹಾಪುರ: ಕೊರೊನಾ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸಿದ ಜನತೆ ಇದೀಗ ತುಸು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಕೋರ್ಟ್ ಆವರಣದಲ್ಲಿ ಕೋವಿಡ್ ತಪಾಸಣೆ ಕೇಂದ್ರವನ್ನು ಸ್ಥಾಪಿಸಿ ಹಲವು ದಿನಗಳಾಗಿವೆ. ಯಾವುದೇ ಪ್ರಕರಣದಲ್ಲಿ ಕಕ್ಷಿದಾರರು ಹಾಜರಾಗಬೇಕಿದ್ದರೆ ಮೊದಲು ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಈಗ ಎಂದಿನಂತೆ ಕೋರ್ಟ್ ಕಲಾಪಗಳು ಸಾಗಿವೆ ಎಂದು ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ ತಿಳಿಸಿದ್ದಾರೆ.
ಕಕ್ಷಿದಾರರ ಸಾಕ್ಷಿ, ಆರೋಪಿಗಳ ಜಾಮೀನು, ಚಾರ್ಜ್, ಸ್ಟೇಟಮೆಂಟ್, ತೀರ್ಪು ನೀಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾಗುತ್ತದೆ. ಆಗ ಕಕ್ಷಿದಾರರನ್ನು ತಪಾಸಣೆ ಮಾಡಿ ಸ್ಥಳದಲ್ಲಿಯೇ ವರದಿಯನ್ನು ಪಡೆಯಲಾಗುತ್ತಿದೆ. ಸಮಧಾನದ ಸಂಗತಿಯೆಂದರೆ ಕಕ್ಷಿದಾರರು ಸ್ವ ಇಚ್ಛೆಯಿಂದ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಹೈಕೋರ್ಟ್ ನಿರ್ದೇನದಂತೆ ಎಸ್‍ಒಪಿ ನಿರ್ದೇಶನದ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಕೋರ್ಟ್ ಆವರಣದ ಪ್ರವೇಶ ದ್ವಾರದಲ್ಲಿ ಎಲ್ಲಾ ವಕೀಲರಿಗೆ ಹಾಗೂ ಸಿಬ್ಬಂದಿಗೆ ಜ್ವರ, ಉಷ್ಣಾಂಶ ತಪಾಸಣೆ ಮಾಡಲಾಗುತ್ತಿದೆ.
ಅಲ್ಲದೆ ಕಡ್ಡಾಯವಾಗಿ ಮಾಸ್ಕ್, ಸುರಕ್ಷಿತ ಅಂತರ ಹಾಗೂ ಗುಂಪು ಗುಂಪಾಗಿ ಸೇರುವುದನ್ನು ನಿರ್ಬಂಧಿಸಲಾಗಿದೆ. ಕೊರೊನಾ ಹಾವಳಿ ನಡುವೆ ಜೀವನ ಮುನ್ನಡೆಸಬೇಕೆಂಬ ಎಂಬ ತಿಳುವಳಿಕೆಯೊಂದಿಗೆ ಸಾಗುತ್ತಿದ್ದೇವೆ. ಈ ಬಗ್ಗೆ ಹೆಮ್ಮೆ ನಮಗೆ ಇದೆ ಎಂದರೆ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವಕೀಲರಾದ ಗುರುರಾಜ ದೇಶಪಾಂಡೆ, ಸಂಗನಗೌಡ ಗೋನಾಲ ಇದ್ದರು.