ಪ್ರಮುಖ ಸುದ್ದಿ

ಹಂಸಲೇಖರು ಕನ್ನಡದ ಗಜ‌ ನಿಂಬೆ ಅಂದಿದ್ಯಾರಿಗೆ ಗೊತ್ತಾ.?

ಹಂಸಲೇಖರು ಕನ್ನಡದ ಗಜ‌ ನಿಂಬೆ ಅಂದಿದ್ಯಾರಿಗೆ ಗೊತ್ತಾ.?

ವಿವಿ‌ಡೆಸ್ಕ್ಃ ಸರಿಗಮಪ ಸೀಸನ್ 17 ರ ಸ್ಪರ್ಧಿಗಳ ಆಯ್ಕೆಯ ಎರಡನೇ ರೌಂಡ್ ಮುಂದುವರೆದಿದ್ದು, ಖ್ಯಾತ ನಿರೂಪಕಿ, ನಟಿ‌ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮವನ್ನು ಅತ್ಯದ್ಭುತ ವಾಗಿ‌ ನಡೆಸಿಕೊಂಡು ಹೋಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಸರಿಗಮಪದ ಮಹಾ ಗುರುಗಳಾದ ಸಂಗೀತ ಬ್ರಹ್ಮ ಹಂಸಲೇಕರು, ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಟಪಟ ಅಂಥ ಕನ್ನಡದ ಪದಗಳನ್ನು ಸ್ಪಷ್ಡವಾಗಿ‌ ಉದುರಿಸುತ್ತಿದ್ದ ನಿರೂಪಕಿ ಅನುಶ್ರೀ ಅವರ ಶೈಲಿಗೆ ನಾದ ಬ್ರಹ್ಮ‌ ಹಂಸಲೇಕರು ಏನಮ್ಮ ಅನುಶ್ರೀ ಕನ್ನಡ ಪದಗಳೇ ನಾಚುವಂತೆ‌ ಮಾತನಾಡುತ್ತೀಯ ನಿಜಕ್ಕೂ ನೀನು ಕನ್ನಡದ ನಿಜ‌ ಗಜ ನಿಂಬೆ ಎಂದು ಹೊಗಳಿದರು.

ಗುರುಗಳ‌ ನೀಡಿದ ಭೇಷ್ ಗೆ ಅನುಶ್ರೀ ಧನ್ಯಭಾವ ಅರ್ಪಿಸಿದರು. ಸೀಸನ್ 17 ರಲ್ಲಿ ಉತ್ತಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಮತ್ತೇ ಈ ಬಾರಿ ಜಾನಪದ ಗಾರುಡಿಗ ಹನುಮನಂತೆ ಈ ಸ್ಪರ್ಧೆಯಲ್ಲಿ ಮಿಂಚುವ ಇನ್ನೊಂದು ಹೊಸಮುಖ ಕಂಡು ಬರುತ್ತಿದೆ ಎನ್ನಬಹುದು.

ಒಟ್ಟಾರೆ ಸರಿಗಮಪ ಸೀಸನ್ 17 ಭರ್ಜರಿ ಸಂಗೀತ ಔತಣಕೂಟ ನೀಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕೆಲ್ಲ ಸಂಗೀತ ಗಾರುಡಿಗರಾದ ವಿಜಯ ಪ್ರಕಾಶ, ಅರ್ಜುನ್ ಜನ್ಯ ಮತ್ತು ರಾಜೇಶ ಕೃಷ್ಣನ್ ಅವರ ಮೆರಗು‌ ಸ್ಪರ್ಧಿಗಳಿಗೆ ಮಾರ್ಗದರ್ಶನ ಸ್ಪೂರ್ತಿ ತುಂಬುವ ಮೂಲಕ ಹೊಸ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಸಲಾಗುತ್ತಿದೆ

Related Articles

Leave a Reply

Your email address will not be published. Required fields are marked *

Back to top button