ಪ್ರಮುಖ ಸುದ್ದಿ
ಯಾದಗಿರಿಃ ನಾಳೆ ಶಾಲಾ ಕಾಲೇಜುಗಳಿಗೆ ರಜೆ- ಡಿಸಿ ಕೂರ್ಮಾರಾವ್
ಯಾದಗಿರಿಃ ಎಸ್ ಯುಸಿಐ ಸಂಘಟನೆ ಬಂದ್ ಗೆ ಬೆಂಬಲ
ಯಾದಗಿರಿಃ ತೈಲ ಬೆಲೆ ಏರಿಕೆ ಖಂಡಿಸಿ ಹಲವು ಸಂಘಟನೆಗಳು ನಾಳೆ ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆ ಇಲ್ಲಿನ ಯಾದಗಿರಿ ಜಿಲ್ಲಾಧಿಕಾರಿ ಕೂರ್ಮಾರಾವ್ ಜಿಲ್ಲಾದ್ಯಂತ ಸೋಮವಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಾಳೆ ಕರೆ ನೀಡಿರುವ ಬಂದ್‍ಗೆ ಇಲ್ಲಿನ ಎಸ್‍ಯುಸಿಐ ಸಂಘಟಕರು ನಗರದಲ್ಲಿ ಬಂದ್ ಬೆಂಬಲಿಸಿ, ನಗರದ ಸುಭಾಷ್ ವೃತ್ತ ಶಾಸ್ತ್ರೀ ವೃತ್ತ ಮೊದಲಾದ ಕಡೆ ಸಾರ್ವಜನಿಕ ಸಭೆ ನಡೆಸುವ ಮೂಲಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಲಿದ್ದು, ಆಟೋ ಚಾಲಕರು ವ್ಯಾಪಾರಸ್ಥರು ಸಾರ್ವಜನಿಕರು ಸಹಕರಿಸುವಂತೆ ಸಂಘಟನೆಯ ಪ್ರಮುಖರು ಮನವಿ ಮಾಡಿದ್ದಾರೆ.