ಪ್ರಮುಖ ಸುದ್ದಿ
ಯಾದಗಿರಿಃ ಮುಸ್ಲಿಂ ಬಾಂಧವರಿಂದ ಬಕ್ರೀದ್ ಆಚರಣೆ
ತ್ಯಾಗ, ಬಲಿದಾನದ ಹಬ್ಬ ಬಕ್ರೀದ್ ಆಚರಣೆ
ಯಾದಗಿರಿಃ ಯಾದಗಿರಿ ಜಿಲ್ಲಾದ್ಯಂತ ಸೋಮವಾರ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್‍ನ್ನು ಮುಸ್ಲಿಂ ಬಾಂಧವರು ಆಯಾ ತಾಲೂಕಿನ ಈದ್ಗಾ ಮೈದಾನಗಳಲ್ಲಿ ಬೆಳಗ್ಗೆ ನಿಗದಿತ ಸಮಯದಲ್ಲಿ ಒಂದಡೆ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಬಕ್ರೀದ್ ಹಬ್ಬ ಆಚರಣೆ ಮಾಡಿದರು.
ಪ್ರಾರ್ಥನೆ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮೌಲ್ವಿಗಳು ಧಾರ್ಮಿಕ ಮುಸ್ಲಿಂ ಧರ್ಮಾಚರಣೆ ಕುರಿತು ವಿಶೇಷ ಬೋಧನೆ ಮಾಡಿದರು. ಬೆಳಗ್ಗೆಯಿಂದಲೇ ಮುಸ್ಲಿಂ ಸಮಾಜ ಬಾಂಧವರು ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಮೈತುಂಬಾ ಗಂಧದ ಸುವಾಸನೆ ಲೇಪಿಸಿಕೊಂಡು ಪರಸ್ಪರರು ಹಬ್ಬದ ಶುಭಾಯಗಳನ್ನು ವಿನಿಮಯ ಮಾಡಿಕೊಂಡರು.
ನೆರೆ ಹೊರೆಯವರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುವದಲ್ಲದೆ ಅವರನ್ನು ಮನೆಗೆ ಕರೆದು ಹಬ್ಬದೂಟವನ್ನು ಮಾಡಿದರು. ಮ್ಕಳು ಹಿರಿಯರು ಸೇರಿದಂತೆ ಎಲ್ಲರೂ ತಮ್ಮ ಹಬ್ಬವನ್ನು ಶಾಂತತೆಯಿಂದ ಆಚರಣೆ ಮಾಡಿದರು. ಹಲವಡೆ ತಮ್ಮ ಆತ್ಮೀಯರಿಗೆ ನೆರೆಹೊರೆಯವರಿಗೆ ಕರೆದು ಊಟ ಮಾಡಿಸಿದರೆ, ಕೆಲವರು ನೆರೆಹೊರೆಯವರ ಮನೆಗೆ ಹಬ್ಬದೂಟವನ್ನು ಸಹಿ ಪಾನಕ ಸುರಕುಂಬ ವಿತರಿಸಿದರು.