ಪ್ರಮುಖ ಸುದ್ದಿ
ಕೇಜ್ರಿವಾಲ್ ರನ್ನು ಬಿಜೆಪಿ ಭಯೋತ್ಪಾದಕ ಎಂದಿದ್ದಕ್ಕಾಗಿ ಮತದಾರರ ತಕ್ಕ ಉತ್ತರ
ವಿವಿ ಡೆಸ್ಕ್ಃ ದೆಹಲಿ ಚುನಾವಣೆ ವೇಳೆ ಬಿಜೆಪಿ ಅಲ್ಲಿನ ಸಿಎಂ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಸಂಬೋಧಿಸುವ ಮೂಲಕ ತೆಗಳಿತ್ತು. ಆದರೆ ಅಭಿವೃದ್ಧಿ ಹರಿಕಾರನನ್ನು ‘ಭಯೋತ್ಪಾದಕ’ ಎಂದಿದ್ದಕ್ಕಾಗಿ ತಕ್ಕ ಪಾಠವನ್ನು ಅಲ್ಲಿನ ಮತದಾರರು ಇದೀಗ ಫಲಿತಾಂಶ ಮೂಲಕ ತೋರಿಸಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್ ಮೂಲಕ ಹರಿಹಾಯ್ದಿದಿದ್ದಾರೆ.
ದೆಹಲಿ ಮತದಾರರು ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಎತ್ತಿಹಿಡಿದಿದ್ದಾರೆ. ಮತದಾರರು ತಮ್ಮ ಆದ್ಯತೆ ಅಭಿವೃದ್ಧಿಗೆ ಅಷ್ಟೇ ಎಂಬುದರ ಮೇಲ್ಪಂಕ್ತಿ ಹಾಕಿದ್ದಾರೆ. ಬಿಜೆಪಿ, ಅದರಲ್ಲೂ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸೇರಿದಂತೆ ಇಡೀ ಕೇಂದ್ರ ಸರಕಾರ ತನ್ನ ‘ಚಾಣಕ್ಯ’ ಬಲ ಪ್ರದರ್ಶಿಸಿದರೂ ದೆಹಲಿಯ ಪ್ರಬುದ್ಧ ಮತದಾರ ತನ್ನ ನಿಲುವು ಬದಲಿಸಲಿಲ್ಲ. ಜನತಾ ನ್ಯಾಯಾಲಯದ ಈ ತೀರ್ಪು ಸ್ವಾಗತಾರ್ಹ ಎಂದು ಎಚ್ಡಿಕೆ ಕರೆದಿದ್ದಾರೆ.