ರವಿಶಂಕರ್ ಗುರೂಜಿ, ಪೇಜಾವರಶ್ರೀ ಮಹತ್ವದ ಭೇಟಿಃ ಚರ್ಚಿಸಿದ ವಿಷಯವೇನು ಗೊತ್ತಾ.?
ಉಡುಪಿ ಕೃಷ್ಣಮಠಕ್ಕೆ ರವಿಶಂಕರ್ ಗುರೂಜಿ ಭೇಟಿ
ಉಡುಪಿಃ ಇಂದು ಇಲ್ಲಿನ ಕೃಷ್ಣಮಠಕ್ಕೆ ಆರ್ಟ್ ಆಫ್ ಲೀವಿಂಗ್‍ನ ರವಿಶಂಕರ್ ಗುರೂಜಿ ಭೇಟಿ ನೀಡಿ ಪೇಜಾವರ ಶ್ರೀಗಳೊಂದಿಗೆ ಮಾತುಕತೆ ನಡೆಸಿರುವುದು ಹಲವರಲ್ಲಿ ಕುುತೂಹಲ ಕೆರಳಿಸಿದೆ.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಗೆ ಗೈರು ಹಾಜರರಾಗಿದ್ದ ರವಿಶಂಕರ್ ಗುರೂಜಿ ಇಂದು ಪೇಜಾವರ ಸ್ವಾಮೀಜಿ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ.
ರಾಮ ಮಂದಿರ ನಿರ್ಮಾಣದ ಬಗ್ಗೆ ಅರ್ಧ ಗಂಟೆ ಕಾಲ ಇಬ್ಬರು ಶ್ರೀಗಳ ನಡುವೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ರವಿಶಂಕರ್ ಗುರೂಜಿ ಅಯೋಧ್ಯ ವಿವಾದದಲ್ಲಿ ಮಧ್ಯಸ್ಥಿಕೆವಹಿಸುವುದರ ಬಗ್ಗೆ ಧರ್ಮ ಸಂಸದ್ ಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ರವಿಶಂಕರ್ ಗುರೂಜಿ ಭೇಟಿ ಮಹತ್ವ ಪಡೆದುಕೊಂಡಿದ್ದು, ಮಾತುಕತೆ ನಂತರ ರವಿಶಂಕರ್ ಗುರೂಜಿ ಅವರು, ಧರ್ಮ ಸಂಸದ್ ನಲ್ಲಿ ಅಯೋಧ್ಯ ವಿವಾದದಲ್ಲಿ ಮದ್ಯಸ್ಥಿಕೆವಹಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಲೋಕೋಭಿನ್ನರುಚಿ ಅಂದು ನಸುನಕ್ಕರು.
ಆದರೆ ರಾಮ ಮಂದಿರ ನಿರ್ಮಿಸಲು ಸೌಹಾರ್ಧ ಪ್ರಯತ್ನ ಮುಂದುವರೆಸುವುದಾಗಿ ಅವರು ತಿಳಿಸಿದರು. ಕೋರ್ಟಿನಿಂದ ಹೊರಗೆ ವಿವಾದ ಬಗೆಹರಿಸಲು ಯತ್ನಿಸುವುದಾಗಿ ಹೇಳಿದರು.
ನಾನು ಭೇಟಿಯಾದವರೆಲ್ಲಾ ರಾಮ ಮಂದಿರದ ಪರವಾಗಿದ್ದಾರೆ, ಮುಸ್ಲಿಂರೂ ಸಹಮತ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್ ತಮ್ಮದೆ ಅಭಿಪ್ರಾಯ ಹೊಂದಲು ಸ್ವತಂತ್ರವಿದೆ. ಹೀಗಾಗಿ ರಾಮ ಮಂದಿರ ವಿಚಾರದಲ್ಲಿ ಎಲ್ಲರೂ ಸೌಹಾರ್ಧ ಪ್ರಿಯರು ಎಂದಿದ್ದಾರೆ.
ಪೇಜಾವರ ಶ್ರೀ ಮಾತು..
ರವಿಶಂಕರ್ ಗುರೂಜಿ ಜೊತೆಗಿನ ಮಾತುಕತೆ ವಿವರ ಹೇಳಲ್ಲ. ಗುರೂಜಿ ಅಯೋಧ್ಯ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಧರ್ಮ ಸಂಸದ್ ವಿರೋಧ ವ್ಯಕ್ತಪಡಿಸಿದೆ ಎಂದು ಸಹ ಹೇಳಲಾರೆ. ಧರ್ಮ ಸಂಸದ್ ನ ಅಭಿಪ್ರಾಯಗಳ ಬಗ್ಗೆ ಗುರೂಜಿ ಜತೆ ಚರ್ಚೆಯಾಗಿದೆ. ನ್ಯಾಯಾಲಯದ ಹೊರಗಡೆ ತೀರ್ಮಾನವಾಗಲಿ ಎಂಬುದು ಎಲ್ಲರ ಆಶಯವಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂಬುದಕ್ಕೆ ಎಲ್ಲರ ಸಹಮತವಿದೆ ಎಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದಾರೆ.