ಪ್ರಮುಖ ಸುದ್ದಿ
ಯಾದಗಿರಿಃ ವಿದ್ಯುತ್ ಅವಘಡ ಓರ್ವ ಸಾವು, ಕತ್ತಲಲ್ಲಿ ಗ್ರಾಮ
ವಿದ್ಯುತ್ ತಂತಿ ಬಿದ್ದು ಓರ್ವ ಸಾವು, ಕಿರಾಣಿ ಅಂಗಡಿಗೆ ಬೆಂಕಿ
ಯಾದಗಿರಿ: ತಾಲೂಕಿನ ಮೈಲಾಪುರ ಗ್ರಾಮದ ವಿದ್ಯುತ್ ಪರಿವರ್ತಕವೊಂದರಲ್ಲಿ ಬೆಂಕಿ ಕಂಡು ಬಂದಿದ್ದು, ಪರಿಣಾಮ ವಿದ್ಯುತ್ ತಂತಿ ಕಡಿದು ಬಿದ್ದಿವೆ.
ಆಕಸ್ಮಿಕವಾಗಿ ಕಡಿದು ಬಿದ್ದ ವಿದ್ಯುತ್ ತಂತಿ ಮಹಿಬೂಬ ಹುಸೇನಿ ಎಂಬುವರಿಗೆ ತಗುಲಿದ ಪರಿಣಾಮ ವಿದ್ಯುತ್ ಹರಿದು ಅಸುನೀಗಿದ್ದಾರೆ.
ಅಲ್ಲದೆ ಗ್ರಾಮದ ಕಿರಾಣಿ ಅಂಗಡಿಗೂ ವಿದ್ಯುತ್ ತಂತಿ ತಗುಲಿ ಬೆಂಕಿಗೆ ಆಹುತಿಯಾಗಿದೆ.
ಮತ್ತು ಅಲ್ಲಲ್ಲಿ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಕಡಿದು ಬಿದ್ದಿದ್ದು ಅರ್ಧ ಗ್ರಾಮ ಕಗ್ಗತಲಲ್ಲಿ ಮುಳುಗಿದೆ.
ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಸಂಬಂಧಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದು, ಸೂಕ್ತ ಕ್ರಮಕ್ಕೆ ಮುಂದಾಗಿದ್ದಾರೆ.