ಪ್ರಮುಖ ಸುದ್ದಿ
ಊರ ಕೆರೆಯಲ್ಲಿ ಈಜಾಡಲು ತೆರಳಿದ ಮೂವರು ಬಾಲಕರು ನೀರುಪಾಲು!
ಶಿವಮೊಗ್ಗ: ತಾಲ್ಲೂಕಿನ ತಮ್ಮಡಿಹಳ್ಳಿ ಗ್ರಾಮದ ಸಮೀಪದ ಕೆರೆಯಲ್ಲಿ ಈಜಲು ತೆರಳಿದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ತಮ್ಮಡಿಹಳ್ಳಿ ಗ್ರಾಮದ ಚಿರಂತ್ (14), ವಸಂತ್ (14) ಹಾಗೂ ಅಜೇಯ (12) ಮೃತ ಬಾಲಕರೆಂದು ಗುರುತಿಸಲಾಗಿದೆ.
ಬಾಲಕರ ಶವಗಳನ್ನು ಗ್ರಾಮಸ್ಥರು ನೀರಿನಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಬಾಲಕರ ಶವಗಳನ್ನು ಶಿವಮೊಗ್ಗದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.