ರಾಹುಲ್ ಗಾಂಧಿ ಪ್ರಧಾನಿಯಾದರೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಖಂಡಿತ – ಸಿದ್ರಾಮಯ್ಯ
ರಾಹುಲ್ ಗಾಂಧಿ ಪ್ರಧಾನಿಯಾದರೆ ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ಖಂಡಿತ ದೊರೆಯಲಿದೆ – ಸಿದ್ರಾಮಯ್ಯ
ವಿವಿ ಡೆಸ್ಕ್ಃ ರಾಹುಲ್ ಗಾಂಧಿ ಸಿಂಪಲ್ ಮನುಷ್ಯ. ಕಾಂಗ್ರೆಸ್ ಪಕ್ಷ ಮುನ್ನಡೆಸಿಕೊಂಡು ಹೋಗುವ ಶಕ್ತಿ ಇದೆ. ಕೆಲವರು ಸುಮ್ಮನೆ ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡುತ್ತಿದ್ದಾರೆ.
ರಾಹುಲ್ ಗಾಂಧಿ ಪ್ರಧಾನಿಯಾದರೆ ದೇಶದ ಹಲವಾರು ಸಮಸ್ಯೆಗಳಿಗೆ ಪರಿಹಾರ ಖಂಡಿತ ದೊರೆಯಲಿದೆ. ರಾಹುಲ್ ಅವರಿಗೆ ಅಪಾರ ಕಾಳಜೀ ಇದೆ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಅಭಿಪ್ರಾಯ ಪಟ್ಟರು.
ಖಾಸಗಿ ವಾಹಿನಿಯೊಂದು ನಡೆಸಿದ ಸಂದರ್ಶನದಲ್ಲಿ ಅವರು ಈ ರೀತಿ ಹೇಳಿದ್ದಾರೆ.
ಆದರೆ ರಾಹುಲ್ ಗಾಂಧಿಯವರನ್ನು ನಿಮ್ಮ ಪಕ್ಷದ ಹಲವು ಮುಖಂಡರೆ ನಾಯಕತ್ವ ವಿರೋಧಿಸುತ್ತಾರಲ್ಲ.? ಎಂಬ ಪ್ರಶ್ನೆಗೆ ಅವರು ನಾಯಕತ್ವ ವಿರೋಧಿಸುತ್ತಿಲ್ಲ ರಾಹುಲ್ ಗಾಂಧಿ ನಾಯಕತ್ವ ಬೇಡ ಎಂದಿಲ್ಲ. ಪಾರ್ಟಿ ಸ್ಟ್ರಕ್ಚರ್ ಬದಲಾವಣೆ ಬಯಸಿದ್ದಾರೆ. ಪಾರ್ಟಿಯ ಅಂಗ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವ ಮೂಲಕ ಸಮರ್ಥರಿಗೆ ಜವಬ್ದಾರಿ ನೀಡಲು ಸಲಹೆ ನೀಡಿದ್ದಾರಷ್ಟೆ ಎಂದು ಉತ್ತರಿಸಿದರು.
ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲು ಕಾರಣನಾರು.? ಎಂಬ ಪ್ರಶ್ನೆಗೆ ನೇರವಾಗಿ ನನ್ನ ಅಭಿಪ್ರಾಯ ಪ್ರಕಾರ ಕುಮಾರಸ್ವಾಮೀಯವರೇ ಕಾರಣ ಎಂದುತ್ತಿರಿಸಿದರು.
ಅಲ್ಲದೆ ನೀವು ಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೀರಿ.? ಎಂಬ ಪ್ರಶ್ನೆಗೆ ಇನ್ನೂ ಯಾವುದೇ ಕ್ಷೇತ್ರ ಗುರುತಿಸಿಲ್ಲ. ಬಾದಾಮಿ ಕ್ಷೇತ್ರ ದೂರವಾಗುತ್ತಿರುವದನ್ನು ಅಲ್ಲಿಗೆ ಹೋಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಹಾಗಲ್ಲ ಎಂಬ ಸಲಹೆಯನ್ನು ಆತ್ಮೀಯರು ನೀಡಿದ್ದಾರೆ ಅಷ್ಟೆ. ಚುನಾವಣೆ ಬಂದಾಗ ಕ್ಷೇತ್ರ ಕುರಿತು ಯೋಚಿಸುವೆ ಎಂದಿದ್ದಾರೆ.
ಗೋನಿಷೇಧ ಜಾರಿಯಿಂದ ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ. 10 ವರ್ಷ ಆದ ಮೇಲೆ ರೈತ ಹಸು, ಎತ್ತುಗಳನ್ನು ಮಾರಾಟ ಮಾಡುತ್ತಾನೆ, ವಯಸ್ಸಾದ ಎತ್ತುಗಳನ್ನು ಯಾರು ಸಾಕಬೇಕು.? ಅದಕ್ಕೆ ಬರುವ ವೆಚ್ಚವೆಷ್ಟು ಗೊತ್ತಾ.? ಸರ್ಕಾರವೇನು ಇಂತಹ ಎತ್ತುಗಳು, ಅಥವಾ ಗೊಡ್ಡೆತ್ತು ಸಾಕಲು ದುಡ್ಡು ಕೊಡ್ತಾರಾ.? ಆ ಕುರಿತು ಏನಾದರೂ ಮಾಡಿದ್ದಾರಾ.? ಇದರಿಂದ ರೂರಲ್ ಎಕಾನಮಿ ಹಾಳಾಗಲಿದೆ. ಬರಿ ಧಾರ್ಮಿಕವಾಗಿ ಗೋವುಗಳನ್ನು ಪೂಜೆ ಮಾಡಿ ಜನರ ಭಾವನೆಗಳನ್ನು ಕೆದಕಿ ಬಿಟ್ಟರೆ ಆಯಿತಾ.? ಎಂದು ತಮ್ಮದೇ ಶೈಲಿಯಲ್ಲಿ ಕೇಳಿದರು.