ನಾಡು, ನುಡಿ ಸೇವೆಗೆ ಸಿದ್ಧರಾಗಿ – ದೇವು ಭೀಗುಡಿ ಕರೆ
ಯಾದಗಿರಿ : ಕರ್ನಾಟಕದಲ್ಲಿ ಕನ್ನಡಿಗರಿಗೆ ಪ್ರತಿಯೊಂದು ಕ್ಷೇತ್ರಗಳಲ್ಲಿ ಮೊದಲ ಆದ್ಯತೆ ಸಿಗಬೇಕು, ಅದರ ಜೊತೆಗೆ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕೆಂದು ಕನ್ನಡ ಸೇನೆ ಕರ್ನಾಟಕ ಈಶಾನ್ಯ ವಲಯ ಸಂಘಟನಾ ಕಾರ್ಯದರ್ಶಿ ದೇವು ಭೀಗುಡಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬೆಳಗ್ಗೆ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು,
ಕನ್ನಡ ನಾಡು, ನುಡಿಯ ಬಗ್ಗೆ ಹೋರಾಟ ಮಾಡಲು ನಮ್ಮ ಸಂಘಟನೆ ಕಾರ್ಯಕರ್ತರು ಮುಂಚೋಣಿಯಲ್ಲಿರುತ್ತಾರೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ, ಅದೇ ರೀತಿ ಗಡಿ ವಿಷಯದಲ್ಲೂ ಕೂಡ ಜಿಲ್ಲೆಯಲ್ಲಿ ನಡೆಯುವ ಹೋರಾಟಗಳಿಗೆ ನೀವು ಕೂಡ ಸ್ಪಂಧಿಸುವ ಮೂಲಕ ಜಿಲ್ಲೆಯಲ್ಲಿ ಅತ್ಯುತ್ತಮ ಸಂಘಟನೆಯನ್ನು ಕಟ್ಟಬೇಕೆಂದು ನೂತನ ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಇದೇ ವೇಳೆ ನಡೆದ ಸಭೆಯಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರನ್ನಾಗಿ ವಿಜಯಕುಮಾರ ದಾಸನಕೇರಿ, ಜಿಲ್ಲಾಧ್ಯಕ್ಷ ಕಾರ್ಯಾಧ್ಯಕ್ಷ ಸಿದ್ದಲಿಂಗರೆಡ್ಡಿ ಮುನಗಲ್, ಉಪಾಧ್ಯಕ್ಷ ರಾಜು ಕಲಾಲ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ವಿಜಯ ಚಿಗರಿ, ಮಲ್ಲಿಕಾರ್ಜುನ ನಗನೂರ, ಅಜಯ ಮೀಸೆ, ವಿಶ್ವನಾಥರೆಡ್ಡಿ ಅಲ್ಲೂರ, ಸೈಯದ್ ಸಮೀರ್, ಅಕ್ಬರ್ ಸೇರಿದಂತೆ ಇತರರಿದ್ದರು.