ಪ್ರಮುಖ ಸುದ್ದಿ
ಪಿಯುಸಿ ಫಲಿತಾಂಶ ದಿನಾಂಕ ಪ್ರಕಟ
ಬೆಂಗಳೂರಃ ಕೊರೊನಾ ಸಮಸ್ಯೆ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿಸಿದ್ದ ಸಚಿವ ಸುರೇಶಕುಮಾರ, ಇದೀಗ ದ್ವಿತೀಯ ಪಿಯುಸಿ ಇಂಗ್ಲೀಷ್ ಪೇಪರ್ ಮುಗಿಸಿದ ನಂತರ ಪಿಯುಸಿ ಎಲ್ಲಾ ವಿಷಯಗಳ ಮೌಲ್ಯಮಾಪನ ಕಾರ್ಯವು ಸುಗಮವಾಗಿ ನಡೆಸಿದ್ದು, ಫಲಿತಾಂಶದ ದಿನಾಂಕವು ನಿಗದಿ ಪಡಿಸಿರುವ ಕುರಿತು ಸಚಿವರು ತಿಳಿಸಿದ್ದಾರೆ.
ಇದೇ ಜುಲೈ 18 ರಂದು ಪಿಯು ಫಲಿತಾಂಶ ಹೊರಬೀಳಲಿದೆ ಎಂದು ಮಾಹಿತಿ ನೀಡಿದ್ದು, ಅಲ್ಲದೆ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಸೋಮವಾರದಿಂದ ಆರಂಭವಾಗಲಿದ್ದು, ಜುಲೈ 30 ರಂದು ಪೂರ್ಣಗೊಳ್ಳಲಿದೆ ಎನ್ನಲಾಗಿದೆ.