ಪ್ರಮುಖ ಸುದ್ದಿ
ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದೆ-ಗಂಗಾಧರಮಠ
ಶಹಾಪುರ :ಬಡಾವಣೆಯಲ್ಲಿ ಅನುμÁ್ಠನಗೊಳ್ಳುವ ಕಾಮಗಾರಿಗಳಿಗೆ ಸರ್ವರ ಸಹಕಾರ ಅಗತ್ಯವಾಗಿದೆ, ನಗರಸಭೆಯ ಅಧಿಕಾರಿಗಳು ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ವಾರ್ಡ್ 18ರ ನಗರಸಭೆ ಸದಸ್ಯ ಮಲ್ಲಿಕಾರ್ಜುನ.ಪಿ.ಗಂಗಾಧರಮಠ ತಿಳಿಸಿದರು.
ನಗರದ ವಾರ್ಡ್ 18ರಲ್ಲಿ ನಗರೋತ್ಥಾನ ಯೋಜನೆಯಲ್ಲಿ 22 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಿ ಅಭಿಪ್ರಾಯ ಹಂಚಿಕೊಂಡ ಅವರು, ವಾರ್ಡ್‍ನಲ್ಲಿ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ ನಗರಸಭೆಯ ಅಧಿಕಾರಿ ವರ್ಗ ಅವಕಾಶಗಳನ್ನು ಕಲ್ಪಿಸಬೇಕು, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುವಂತಾಗಬೇಕು, ಯೋಜನೆಗಳು ಸರ್ವರಿಗೂ ತಲುಪಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಬಸವರಾಜ ಶಿವಪೂಜೆ, ತಾಂತ್ರಿಕ ಅಧಿಕಾರಿಗಳಾದ ಶರಣು ಪೂಜಾರಿ, ರಜನಿಕಾಂತ ಸೇರಿದಂತೆ ಬಡಾವಣೆಯ ಜಾವಿದ್ ಜಮಾದಾರ್, ಭೀಮರಾಯ ಕೋಲಕರ್, ಶಕೀಲ್ ಮುಲ್ಲಾ, ಆನಂದ ದೇಶಮುಖ್, ಶರಣು ಕಟ್ಟಿಮನಿ, ನಿಂಗರಾಜ ದೇಶಮುಖ ಇತರರ ಇದ್ದರು .