ಪ್ರಮುಖ ಸುದ್ದಿ
ದೇವರೊಂದಿಗೆ ಸಂಪರ್ಕ ಇರುವವರು ಅಯೋಧ್ಯೆಯಲ್ಲಿ ಯಾಕೆ ಸೋತರು? ರಾಹುಲ್ ಗಾಂಧಿ ಪ್ರಶ್ನೆ

ಅಹಮದಾಬಾದ್: ನರೇಂದ್ರ ಮೋದಿ ತಮ್ಮನ್ನು ತಾವು ಅಜೈವಿಕ ವ್ಯಕ್ತಿ ಎಂದು ಕರೆದುಕೊಳ್ಳುತ್ತಾರೆ. ದೇವರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವುದಾಗಿ ಹೇಳುತ್ತಾರೆ. ಹಾಗಾದ್ರೆ ಅಯೋಧ್ಯೆ ಲೋಕಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಕೆ ಸೋತರು? ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಅಹಮದಾಬಾದ್‌ನಲ್ಲಿ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದ ಅವರು, ಅಜೈವಿಕ ವ್ಯಕ್ತಿ ಆಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಜನಸಾಮಾನ್ಯರ ಕಷ್ಟಗಳು ಅರ್ಥವಾಗುತ್ತಿಲ್ಲ. ಕಾರ್ಮಿಕರು ಹಾಗೂ ರೈತರ ಕಷ್ಟಗಳು ಅರ್ಥವಾಗುತ್ತಿಲ್ಲ. ಅಯೋಧ್ಯೆಯಲ್ಲಿ ‘ಇಂಡಿಯಾ’ ಒಕ್ಕೂಟವು ಬಿಜೆಪಿಯನ್ನು ಸೋಲಿಸಿದೆ. ಅದರಂತೆ ಮುಂದೆ ಒಮ್ಮೆ ನಾವು ಎಲ್ಲೆಡೆ ನಾವು ಅವರನ್ನು ಸೋಲಿಸಲಿದ್ದೇವೆ ಎಂದು ಹೇಳಿದ್ದಾರೆ.