ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕಾಲಿಟ್ಟ ಕೊರೊನಾ 68 ಜನ ಸಿಬ್ಬಂದಿ ಹೋಮ್ ಕ್ವಾರಂಟೈನ್
ಆಸ್ಪತ್ರೆ ಸೀಲ್ ಡೌನ್, ದಿಗ್ಗಿ ಅಗಸಿ ಕಂಟೋನ್ಮೆಂಟ್ ವಲಯ..
ಶಹಾಪುರಃ ಕಳೆದ ನಾಲ್ಕು ತಿಂಗಳಿಂದ ಕೊರೊನಾ ವಾರಿಯರ್ಸ್ ಆಗಿ ನಿರಂತರ ಸೇವೆಯಲ್ಲಿದ್ದ ಇಲ್ಲಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಯೋರ್ವರಿಗೆ ಕೊರೊನಾ ಸೋಂಕು ದೃಢವಾದ ಹಿನ್ನೆಲೆ ಆಸ್ಪತ್ರೆ ವೈದ್ಯರು ಸೇರಿದಂತೆ 68 ಜನ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
ಸೋಮವಾರ ಇಡಿ ಆಸ್ಪತ್ರೆ ಸ್ಯಾನಿಟೈಸ್ ಮಾಡಲಾಗಿ, ಎರಡು ದಇನಗಳ ಕಾಲ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಮೂಲಕ ಸಿಲ್ ಡೌನ್ ಮಾಡಲಾಗಿದೆ.
ಈತ್ತೀಚೆಗೆ ಆಸ್ಪತ್ರೆ ಸಿಬ್ಬಂದಿಯವರ ಗಂಟಲು ದ್ರವ ಮತ್ತು ರಕ್ತ ಮಾದರಿ ಪರೀಕ್ಷೆಗೆ ಒಳಪಡಿಸಿದ್ದು, ಇದೀಗ ವರದಿ ಬಂದಿದ್ದು, ಸಿಬ್ಬಂದಿ ಓರ್ವರಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆ ಇಡಿ ಆಸ್ಪತ್ರೆ ಸ್ಯಾನಿಟೈಸ್ ಮಾಡಲಾಗಿದ್ದು, ಎಲ್ಲಾ ಸಿಬ್ಬಂದಿಯನ್ನು ಹೋಮ್ ಕ್ವಾರಂಟೈನ್ ವ್ಯವಸ್ಥೆಯಲ್ಲಿರುವಂತೆ ಸೂಚಿಸಲಾಗಿದೆ. ಮತ್ತು ಎಲ್ಲಾ 68 ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷಾ ವರದಿ ಬರುವವರೆಗೂ ಹೋಮ್ ಕ್ವಾರಂಟೈನ್ ನಲ್ಲಿರಲು ತಿಳಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ.
ಆಸ್ಪತ್ರೆ ಸೀಲ್ ಡೌನ್ ಃ ಆಸ್ಪತ್ರೆಗೆ ಬರುವ ರೋಗಿಗಳನ್ನು ತಡೆಯಲಾಗುತ್ತಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಆದರೆ ಗರ್ಭೀಣಿ ಸ್ತ್ರೀಯರಿಗೆ ಮತ್ತು ಒಳರೋಗಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಿಗಿಕರ್ ತಿಳಿಸಿದ್ದಾರೆ..
ದಿಗ್ಗಿ ಅಗಸಿ ಕಂಟೋನ್ಮೆಂಟ್ ವಲಯಃ ದಿಗ್ಗಿ ಪ್ರದೇಶ ವಾಸವಿರುವ ಆಶಾ ಕಾರ್ಯಕರ್ತೆಯೊಬ್ಬರಿಗೆ ಕೊರೊನಾ ದೃಢವಾದ ಹಿನ್ನೆಲೆ ದಿಗ್ಗಿ ಬೇಸ್ ಪ್ರದೇಶದ ಜನತೆಯಲ್ಲಿ ಆತಂಕ ಎದುರಾಗಿದೆ. ಆ ಪ್ರದೇಶ ಕಂಟೋನ್ಮೆಂಟ್ ವಲಯ ಎಂದು ಗುರುತಿಸುವ ಸಾಧ್ಯತೆ ಇದ್ದು, ಆ ಭಾಗದ ಜನರು ಗುಂಪು ಗುಂಪಾಗಿ ಸಂಚರಿಸದಂತೆ ಎಚ್ಚರಿಕೆವಹಿಸಲು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯವಿದ್ದಲ್ಲಿ ಮಾತ್ರ ಹೊರ ಬರುವಂತೆ ಇಲ್ಲವಾದರೆ ಮನೆಯಲ್ಲಿರುವಂತೆ ಸೂಚನೆ ನೀಡಲಾಗಿದೆ. ದಿಗ್ಗಿ ಬೇಸ್ ಪ್ರದೇಶ ನಿವಾಸಿಗರು ಮಾಸ್ಕ್ ಧರಿಸಿ ಹೊರಬರಬೇಕು, ಅಂಗಡಿ ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ಕಠಿಣ ನಿಯಮಗಳನ್ನು ಪಾಲಿಸಬೇಕೆಂದು ತಾಲೂಕು ಆಡಳಿತ ಸೂಚಿಸಿದೆ. ಭಯ ಆತಂಕ ಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆ ಅಗತ್ಯವಾಗಿ ಪಾಲಿಸಬೇಕು. ಮಕ್ಕಳು ವೃದ್ಧರು ಹೊರಗಡೆ ಬರಬಾರದು ಸಾಮಾಜಿಕ ಅಂತರ ಪಾಲನೆ ಅತ್ಯಗತ್ಯ ಎಂದು ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.