ಕಾವ್ಯ
ಒಳಗೆ ಹುರುಪು ಹೊರಗೆ ಹುಸಿ ಮುನಿಸು ಕವಿ ಕಾಸೆ ಬರೆದ ಕನ್ನಡ ಗಜಲ್
ಸುಮ್ಮನೆ ನಲಿದಾಡು ಸಖಿ
ಹೊರಗೆ ಹುಸಿ ಮುನಿಸು ಒಳಗೆ ಹುರುಪು ಚೆಂದ ಸುಮ್ಮನೆ ನಲಿದಾಡು ಸಖಿ
ಸುಳ್ಳಾಡುವೆ ಆಗಾಗ ಸುಮ್ಮನೆ ನಿನ್ನ ಮುದ್ದಿಸಲು ಮುದ್ದಾಗಿ ರೇಗಾಡು ಸಖಿ
ಬಿಕ್ಕಳಿಕೆ ನೆಪವೇಕೆ ಎದುರಿಗೆ ನಾನಿರುವಾಗ ನೆನಪುಗಳ ಹಂಗಿಲ್ಲ
ಸರಸ ಸಲ್ಲಾಪದ ಖುಷಿ ಮೊಗದಲ್ಲಿ ಪ್ರತಿಫಲಿಸಿ ಕೋಗಿಲೆಯ ಹಾಡು ಸಖಿ
ದುಃಖ ದುಮ್ಮಾನಗಳ ಮೀಟಿ ದಿಕ್ಕೆಡಿಸುವ ಬಾ ಹಾಳಾಗಿ ಹೋಗಲಿ ಆ ಕಡೆಗೆ
ಸಮಸ್ಯೆಗಳ ಕೊರಗು ಮೀರಿ ಹೊರಗೆ ಹೆಜ್ಜೆ ಇಟ್ಟು ಎದುರಿಸಿ ನೋಡು ಸಖಿ
ನಿನ್ನ ಅಪ್ಪುಗೆಯ ಖುಷಿಯಲ್ಲಿ ಕಷ್ಟ ನೋವುಗಳು ಹೇಳ ಹೆಸರಿಲ್ಲದವು
ಮೂಗಿಗಿಂತ ಹರಿತ ಕೆಂಪಾಗಿ ಕಾದ ಮೊಗ ಯಾವ ಆಯುಧದ ಜಾಡು ಸಖಿ
ಇರಲಿ ಇಲ್ಲದಿರಲಿ ಜೊತೆಯಾಗಿ ನಾನಿರುವಾಗ ಬೇಕಿಲ್ಲ ಹೆದರಿಕೆ
ಇಟ್ಟ ಕಣ್ಣ ದಿಟ್ಟಿಸಿ ಹುಬ್ಬ ಹಾರಿಸಿ ಕೈ ಹಿಡಿದು ಬಿಡದೆ ನೀ ಕಾಡು ಸಖಿ
–ಬಸವರಾಜ ಕಾಸೆ
ಸುಂದರ ಹಂದರ ಮನೋಹರ ಸರ್