Homeಜನಮನಪ್ರಮುಖ ಸುದ್ದಿ

‘ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ’- ಹೆಚ್.ಸಿ.ಮಹಾದೇವಪ್ಪ

ಬೆಂಗಳೂರು: ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಎಲ್ಲಾ ಶಾಸಕರು, ಮಂತ್ರಿಮಂಡಲ ಮತ್ತು ಹೈಕಮಾಂಡ್ ಸಿಎಂ ಬೆಂಬಲಕ್ಕೆ ಇದ್ದಾರೆ ಎಂದು ಎಂದು ಸಚಿವ ಹೆಚ್.ಸಿ.ಮಹಾದೇವಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಆರೋಗ್ಯಕರವಾಗಿದ್ದಾರೆ. ನಿತ್ಯ ಕೆಲಸ ಮಾಡುತ್ತಿರುವ ಅವರಿಗೆ ಆಯಾಸವಾಗುವುದಿಲ್ಲ. ಖರ್ಗೆ, ರಾಹುಲ್ ಗಾಂಧಿ, ವೇಣುಗೋಪಾಲ್ ಮತ್ತು ಸುರ್ಜೇವಾಲ ಸಮ್ಮುಖದಲ್ಲೇ ನಾಯಕತ್ವದ ಬದಲಾವಣೆ ಇಲ್ಲ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ನನ್ನ ಸಿದ್ಧಾಂತ ಒಂದೇ. ಇವತ್ತೋ ನಿನ್ನೆಯೋ ನಾನು ಅವರ ಪರವಾಗಿ ನಿಂತಿಲ್ಲ. ಬಹಳ ವರ್ಷಗಳಿಂದ ಅವರ ಪರವಾಗಿದ್ದೇನೆ. ಜೆಡಿಎಸ್, ಬಿಜೆಪಿ ಷಡ್ಯಂತ್ರ ಭಗ್ನಗೊಳಿಸಲು ಒಗ್ಗಟ್ಟಾಗಿ ನಿಂತಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

ರಾಜಭವನ ದುರ್ಬಳಕೆ ಮಾಡಿಕೊಳ್ಳುವ ಜೆಡಿಎಸ್, ಬಿಜೆಪಿ ಹುನ್ನಾರ ಹೈಕಮಾಂಡ್‌ಗೆ ಅರ್ಥವಾಗಿದೆ. ನಮ್ಮ ಸಿಎಂ, ಕೆಪಿಸಿಸಿ ಅಧ್ಯಕರು ಪ್ರತ್ಯೇಕವಾಗಿ ಹೈಕಮಾಂಡ್ ಭೇಟಿಯಾಗಿ ಈ ಬಗ್ಗೆ ವಿವರಿಸಿದ್ದಾರೆ. ಮುಡಾ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಸಾಕಷ್ಟು ಕಾನೂನು ತಜ್ಞರು ಹೇಳಿದ್ದಾರೆ. ಕುಮಾರಸ್ವಾಮಿ, ಜೊಲ್ಲೆ, ರೆಡ್ಡಿ, ನಿರಾಣಿ ಪ್ರಕರಣಗಳು ರಾಜ್ಯಪಾಲರ ಮುಂದೆ ಇದೆ. ಅವುಗಳನ್ನು ಬಿಟ್ಟು ಸಿದ್ದರಾಮಯ್ಯ ಕೇಸ್ ಮಾತ್ರ ಪ್ರಾಸಿಕ್ಯೂಷನ್‌ಗೆ ಅನುಮತಿ ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯಪಾಲರು ರಾಷ್ಟ್ರಪತಿಗಳ ಪ್ರತಿನಿಧಿ. ಸಂವಿಧಾನದ ಮೇಲೆ ಕೆಲಸ ಮಾಡುವವರು. ಬೆಳಗ್ಗೆ ದೂರು ಕೊಟ್ಟರೆ ಸಂಜೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ಇದನ್ನು ನೋಡಿದರೆ ಏನು ಗೊತ್ತಾಗುತ್ತಾದೆ ಎಮದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button