ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗೋದು ಶತಸಿದ್ಧ -ಖರ್ಗೆ
ರಾಹುಲ್ ನೇತೃತ್ವದಲ್ಲೇ ಮುಂದಿನ ಚುನಾವಣೆ : ಖರ್ಗೆ
ಯಾದಗಿರಿಃ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವುದು ಶತಃಸಿದ್ಧ. ಅವರ ನೇತೃತ್ವದಲ್ಲಿಯೇ ಮುಂಬರುವ ಚುನಾವಣೆ ಎದುರಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಗರದಲ್ಲಿ ಆಯೋಜಿಸಲಾಗಿದ್ದ ನೂತನ ಎಸ್‍ಪಿ ಕಚೇರಿ ಉದ್ಘಾಟನೆ ನಂತರ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಎಸ್‍ಟಿ ಕುರಿತು ತಮಿಳು ಸಿನಿಮಾವೊಂದರಲ್ಲಿ ನಟ ವಿಜಯ್ ಡೈಲಾಗ್ ನಿಂದಾಗಿ ಬಿಜೆಪಿ ಕಂಗಾಲಾಗಿದೆ. ಸೆನ್ಸಾರ್ ಬೋರ್ಡ್‍ನಿಂದ ಕಟ್ ಮಾಡಿಸಲು ಮುಂದಾಗಿದೆ. ಎಲ್ಲವೂ ತಾವೂ ಹೇಳಿದಂತೆ ನಡೆಯಬೇಕೆಂಬುದು ಮೋದಿಯ ನಡೆಯಾಗಿದೆ.
ಕಾರಣ ಎಲೆಕ್ಷನ್ ಕಮಿಷನ್ ತನ್ನ ಸ್ವಾಯತ್ತತೆ ಕಳೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಕೇಳುತ್ತಿದೆ ಎಂಬ ಅನುಮಾನ ನನಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಗುಜರಾತ್‍ಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಿದ್ಧವಾಗಿದೆ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ ಸ್ಥಳೀಯ ಶಾಸಕರು
ನೂತನ ಎಸ್‍ಪಿ ಕಚೇರಿ ಉದ್ಘಾಟನೆ ನಂತರ ನಗರದಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್‍ನ ಗುರುಮಠಕಲ್ ಶಾಸಕ ಬಾಬುರಾವ್ ಚಿಂಚನಸೂರ ಮತ್ತು ಯಾದಗಿರಿ ಶಾಸಕ ಎ.ಬಿ.ಮಾಲಕರಡ್ಡಿ ನಿದ್ದೆಗೆ ಜಾರಿದ್ದರು. ಕಾಂಗ್ರೆಸ್‍ನ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಗೃಹ ಸಚಿವ ರಾಮಲಿಂಗಾರಡ್ಡಿ ಗೋಷ್ಠಿಯಲ್ಲಿ ಮಾತನಾಡುತ್ತಿರುವಾಗ ಇಬ್ಬರು ಶಾಸಕರು ನಿದ್ದೆಗೆ ಜಾರಿದ್ದರು.