ಅ.5.6 ರಂದು ರಾಷ್ಟ್ರೀಯ ತೆರಿಗೆ ಸಲಹೆಗಾರರ & ಸಂಸ್ಥಾಪಕ ದಿನಾಚರಣೆ
ಅ.5, 6 ರಂದು ತೆರಿಗೆ ಸಲಹೆಗಾರರ & ಸಂಸ್ಥಾಪಕರ ದಿನ ಕಾರ್ಯಕ್ರಮ
ಯಾದಗಿರಿಃ ಅಕ್ಟೋಬರ್ 05 ಮತ್ತು 06 ರಂದು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾಕ್ಷೇತ್ರದಲ್ಲಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನ ಮತ್ತು ಸಂಸ್ಥಾಪಕರ ದಿನಾಚರಣೆ ಅಂಗವಾಗಿ ದೊಡ್ಡಮಟ್ಟದ ಸಮಾರಂಭವನ್ನು ಆಯೋಜಿಸಲಾಗಿದೆ ಕಾರಣ ಎರಡು ದಿನಗಳ ಕಾಲ ನಡೆಯುವ ಆ ಕಾರ್ಯಕ್ರಮದಲ್ಲಿ ಜಿಲ್ಲೆಯ ತೆರಿಗೆ ಸಲಹೆಗಾರರು ಮತ್ತು ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಯಾದಗಿರಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಗುರಮೂರ್ತಿ ನಾಯನೇಗಿಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.5 ರಂದು ನಡೆಯುವ ಸಮಾರಂಭವನ್ನು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಘಾಟಿಸಲಿದ್ದು, ಕೇಂದ್ರ ಸರ್ಕಾರದ ಸಚಿವರಾದ ಪ್ರಹ್ಲಾದ್ ಜೋಷಿ ಮತ್ತು ಸುರೇಶ್ ಅಂಗಡಿ, ಜೊತೆಗೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಜಗಧೀಶ ಶೆಟ್ಟರ್ ಉಪಸ್ಥಿತಿ ಇರಲಿದ್ದಾರೆ.
ಅ.6 ರಂದು ನಡೆಯುವ ಕಾರ್ಯಕ್ರಮ ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸಲಿದ್ದು, ನಮ್ಮ ಸಂಘದ ವೆಬಸೈಟ್, ಲೋಗೋ ಹಾಗೂ ಸಂಘದ e-journal ಗಳನ್ನು ಬಿಡುಗಡೆ ಮಾಡಲಿದ್ದಾರೆ.
ಅಲ್ಲದೆ ತೆರಿಗೆ ಸಲಹೆಗಾರರಿಗಾಗಿ, ಸಂಘಕ್ಕಾಗಿ ದುಡಿದ ಹಲವು ಹಿರಿಯರನ್ನ ಅಂದು ಗೌರವಿಸುವಿಸಲಾಗುವದು.
ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಆಚರಿಸುತ್ತಿರುವ ಈ ಕಾರ್ಯಕ್ರಮದಲ್ಲಿ ತೆರಿಗೆ ಸಲಹೆಗಾರರೆಲ್ಲರೂ ಒಟ್ಟಾಗಿ ಸಂಭ್ರಮಿಸುವ ಅಪೂರ್ವ ಕ್ಷಣಗಳಿಗೆ ನೀವೆಲ್ಲರೂ ಸಾಕ್ಷಿಯಾಗಲಿದ್ದೀರಿ.
ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಇಡೀ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣವಾಗಬೇಕಿದೆ ಎಲ್ಲರೂ ಅವರು ಕೋರಿದ್ದಾರೆ.