ಪ್ರಮುಖ ಸುದ್ದಿ
ಸಂಧ್ಯಾವಂದನೆ ಮಾಡಲು ತೆರಳಿದ್ದ ವಚನಾನಂದ ಸ್ವಾಮೀಜಿ ಮಾಡಿದ್ದೇನು.?
ಸಂಧ್ಯಾವಂದನೆ ಮಾಡಲು ತೆರಳಿದ್ದ ವಚನಾನಂದ ಸ್ವಾಮೀಜಿ ಮಾಡಿದ್ದೇನು.?
ವಿವಿ ಡೆಸ್ಕ್ಃ ವೀರಶೈವ ಪಂಚಮಸಾಲಿ ಲಿಂಗಾಯತ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಸಂಧ್ಯಾವಂದನೆಗಾಗಿ ಗಂಗಾನದಿ ತೀರಕ್ಕೆ ತೆರಳಿದ್ದರು ಆಗ ತೀರದಲ್ಲಿ ಕಂಡು ಬಂದ ಕಸದ ರಾಶಿ ನೋಡಿ ಸ್ವತಃ ತಾವೇ ಕೈಯಲ್ಲಿ ಬಾರಿಗೆ ಹಿಡಿದು ಸ್ವಚ್ಛಗಿಳಿಸುವ ಮೂಲಕ ಮಾದರಿ ಸ್ವಾಮೀಜಿ ಎನಿಸಿದರು.
ಕೊರೆಯುವ ಚಳಿಯಲ್ಲೂ ಸ್ವಾಮೀಜಿ ಸಂಧ್ಯಾವಂದನೆಗಾಗಿ ತೆರಳಿದ್ದಾಗ ಘಾಟ್ ನ ಮೆಟ್ಟಿಲುಗಳ ಮೇಲೆ ಕಸ ಬಿದ್ದಿರವದನ್ನು ಕಂಡ ಅವರು ಕೂಡಲೇ ಕಾರ್ಯೋನ್ಮುಖರಾದರು.
ಪೊರಕೆ ಮೂಲಕ ಕಸ ಗುಡಿಸಿ ಕಸದ ತೊಟ್ಟಿಗೆ ಎಸೆದರು.
ನಂತರ ಸಂಧ್ಯಾವಂದನೆ ನೆರವೇರಸಿ ಗಂಗಾ ಆರತಿ ಮಾಡಿದರು. ನೂರಾರು ಜನ ಇತರೆ ಸ್ವಾಮೀಜಿಗಳು ಜೊತೆ ಇದ್ದರು.