ಪ್ರಮುಖ ಸುದ್ದಿ
ಬೈಕ್-ಲಾರಿ ಮುಖಾಮುಖಿ ಡಿಕ್ಕಿ ಬೈಕ್ ಸವಾರ ಸಾವು
ಶಹಾಪುರಃ ಬೈಕ್-ಲಾರಿ ನಡುವೆ ಡಿಕ್ಕಿ ಓರ್ವನ ಸಾವು
ಯಾದಗಿರಿಃ ಬೈಕ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ನಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ತುಮಕೂರ ಕ್ರಾಸ್ ಹತ್ತಿರ ನಡೆದಿದೆ.
ಶಹಾಪುರ ತಾಲೂಕಿನ ತುಮಕೂರ ಗ್ರಾಮದಿಂದ ತಡಿಬಿಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಭೀಮಣ್ಣ ಕುರಬುರ (40) ಎಂಬಾತ ಮೃತ ದುರ್ದೈವಿ.
ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷವೇ ಕಾರಣ ಎನ್ನಲಾಗಿದ್ದು, ಚಾಲಕ ಘಟನೆ ನಂತರ ಪರಾರಿಯಾಗಿದ್ದಾನೆ. ಮೃತ ಬೈಕ್ ಸವಾರ ತಡಿಬಿಡಿ ಗ್ರಾಮದ ನಿವಾಸಿಯಾಗಿದ್ದು, ಘಟನೆ ಕುರಿತು ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.