ರೇಣುಕಾಸ್ವಾಮಿಯಿಂದ ನಮಗೂ ಅಶ್ಲೀಲ ಸಂದೇಶ ಬಂದಿತ್ತು ಎಂದಿದ್ದವರಿಗೆ ಎದುರಾಯ್ತು ಸಂಕಷ್ಟ
ರೇಣುಕಾಸ್ವಾಮಿಯಿಂದ ನಮಗೂ ಅಶ್ಲೀಲ ಸಂದೇಶ ಬಂದಿತ್ತು ಎಂದಿದ್ದವರಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇನ್ನು ಈ ಬಗ್ಗೆ ಹಲವರು ದರ್ಶನ್ ಪರ ಇನ್ನು ಕೆಲವರು ವಿರುದ್ಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಲ್ಲದೆ, ಅಂಧಾಭಿಮಾನಿಗಳಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮತ್ತೊಂದೆಡೆ ವಿಚಿತ್ರ ಎಂದರೆ ಸುಮ್ನಿರಲಾರದೇ ತಾವೇ ಇರವೇ ಬಿಟ್ಟುಕೊಂಡಿದ್ದಾರೆ ಎನ್ನುವ ರೀತಿ ಕೆಲವರ ಪಾಡಾಗಿದೆ.
ದರ್ಶನ್ ಪರ & ವಿರೋಧ ಮಾತನಾಡುತ್ತಲೇ ಇದ್ದಾರೆ. ಇದರ ನಡುವೆಯೇ ಕೆಲವೊಬ್ಬರು ರೇಣುಕಾಸ್ವಾಮಿ ನಮಗೂ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದರು ಎಂದು ಹೇಳಿಕೊಂಡಿದ್ದರು. ಇಂತಹವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಹೇಗೆ ಅಂತೀರಾ ಇಲ್ಲಿದೆ ನೋಡಿ ಮಾಹಿತಿ.
ಇದು ಹೈ ಪ್ರೊಫೈಲ್ ಕೇಸ್ ಆಗಿದ್ದು, ಈ ಬಗ್ಗೆ ಹೇಳಿಕೆ ಕೊಡುವವರ ಮೇಲು ಕೂಡ ಪೊಲೀಸರು ಹದ್ದಿನ ನಿಗಾ ಇಟ್ಟಿದ್ದಾರೆ. ಹಾಗೆಯೇ ಇದೀಗ ರೇಣುಕಾಸ್ವಾಮಿ ನಮಗೂ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂದು ಹೇಳಿಕೊಂಡಿರುವ ಇಬ್ಬರು ಬಿಗ್‌ಬಾಗ್ ಸ್ಪರ್ಧಿಗಳಿಗೆ ಇದೀಗ ತನಿಖೆಯ ಸಂಕಷ್ಟ ಎದುರಾಗಿದೆ.
ಸಾಮಾನ್ಯವಾಗಿ ಬೇರೆಯವರಿಗೆ ಒಬ್ಬ ವ್ಯಕ್ತಿ ತೊಂದರೆ ಕೊಟ್ಟಿದ್ದಾನೆ ಎಂದರೆ, ಕಾನೂನಿನ ಪ್ರಕಾರಣ ಇದಕ್ಕೆ ಸಾಕ್ಷಿಗಳು ಕೂಡ ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ತಮಗೂ ಕೂಡ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂದು ಮಾತಿನ ಭರದಲ್ಲಿ ಹೇಳಿದ್ದಾರೋ ಅಥವಾ ಸಾಕ್ಷಿ ಇದೆಯಾ ಎಂದು ತಿಳಿದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ದರ್ಶನ್ ಪ್ರಕರಣದ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ಸೋನು ಗೌಡ ಅವರು ತಮ್ಮ ಯುಟ್ಯೂಬ್ ಚಾನೆಲ್‌ವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಆ ಅಕೌಂಟ್‌ನಿಂದ ನನಗೂ ಅಶ್ಲೀಲವಾಗಿ ಮೆಸೇಜ್ ಬಂದಿದೆ ಅಂತಾ ಬೇಸರ ಹೊರ ಹಾಕಿದ್ದ ಸೋನುಗೌಡಗೆ ಎಂದು ತನಿಖೆಯ ಸಂಕಷ್ಟ ಎದುರಾದಂತಾಗಿದೆ.
ಸೋನು ಗೌಡ ಹೇಳಿದ್ದೇನು?: “ಯ್ಯೂಟೂಬ್‌ನಲ್ಲಿ ನಾನು ಒಂದು ವಿಡಿಯೋ ನೋಡಿದೆ. ಅದೇ ಅಕೌಂಟ್‌ನಿಂದ ತುಂಬಾ ಹುಡುಗಿಯರಿಗೆ ಈತ ಅಶ್ಲೀಲ ಸಂದೇಶ ಮಾಡಿದ್ದ. ಆದ್ದರಿಂದ ನಾನೂ ನನ್ನ ಫೋನ್‌ನಲ್ಲಿ ಚೆಕ್ ಮಾಡಿದೆ. ಆಗ ಆ ಯಪ್ಪ ನನಗೂ ಸಂದೇಶ ಕಳುಹಿಸಿದ್ದಾರೆ. ಆತ ತಪ್ಪು ಮಾಡಿದ್ದಾನೆ ಅಂತಾ ಅವರ ಕುಟುಂಬಕ್ಕೆ ನಾನು ಏನು ಹೇಳುತ್ತಿಲ್ಲ. ನನಗೂ ಕೆಟ್ಟದಾಗಿ ಅನೇಕರು ಕಾಮೆಂಟ್ ಮಾಡುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಕಾಮೆಂಟ್ ಮಾಡಿದರೆ ಸುಮ್ಮನೆ ಇರುತ್ತೀರಾ?,” ಅಂತಾ ಪ್ರಶ್ನೆ ಮಾಡಿದ್ದರು.
ಅಲ್ಲದೆ, “ಒಂದು ಬಾರಿ ಅಭಿಮಾನಿಯಾದರೆ ಸಾಯುವವರೆಗೂ ಆ ಅಭಿಮಾನ ಇದ್ದೇ ಇರುತ್ತದೆ. ನಾನು ಕೂಡ ದರ್ಶನ್ ಅಭಿಮಾನಿ. ದರ್ಶನ್ ಮಾಡಿದ್ದು ತಪ್ಪು ಅಂತಾ ಅನೇಕರು ಹೇಳುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು,” ಅಂತಲೂ ಹೇಳಿದ್ದರು.
ಚಿತ್ರಾಲ್ ಹೇಳಿದ್ದೇನು?: ಬಿಗ್‌ಬಾಸ್ ಖ್ಯಾತಿಯ ನಟಿ ಚಿತ್ರಾಲ್ ಸಹ ನನಗೂ ಈ ಅಕೌಂಟ್‌ನಿಂದ ಅಶ್ಲೀಲ ಸಂದೇಶ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿ ರೇಣುಕಾಸ್ವಾಮಿ ಅವರದ್ದು ಎನ್ನಲಾದ ಅಕೌಂಟ್ ಫೋಟೋವನ್ನು ಸ್ಟೋರಿಯಲ್ಲಿ ಶೇರ್ ಮಾಡಿಕೊಂಡು ಆ ಬಗ್ಗೆ ಮಾತನಾಡಿದ್ದರು.
“ಈ ಕೊಲೆ ವಿಚಾರವಾಗಿ ಎಲ್ಲರಿಗೂ ತುಂಬಾ ನೋವಾಗಿದೆ. ಆದರೆ ಇಲ್ಲಿ ಯಾರಿಗೂ ನಾನು ಸಪೋರ್ಟ್ ಮಾಡಲು ಬಂದಿಲ್ಲ. ದೇವರು ರೇಣುಕಾಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾಸ್ವಾಮಿ ಅವರು ಈ ರೀತಿ ಹಲವರಿಗೆ ಸಂದೇಶ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ಆಗಿದೆ. ಅವರ ಅಕೌಂಟ್ ಈ ರೀತಿ ಗೌತಮ್ ಅನ್ನುವ ಹೆಸರಲ್ಲಿದ್ದು, ಅದರಿಂದ ಅದೇ ರೀತಿಯ ಕೆಟ್ಟದಾಗಿ ಸಂದೇಶಗಳನ್ನು ತುಂಬಾ ಜನರಿಗೆ ಕಳುಹಿಸಿದ್ದರಂತೆ. ನಾನು ಕೂಡ ಶಾಕ್ ಆದೆ,” ಎಂದು ಹೇಳಿದ್ದರು.