“ಕಾಡು ಕನಸಿನ ಬೀಡಿಗೆ” ಕಾನನದ ಅರಿವು ತುಂಬಿದ “ಚಂದ್ರ”ನ ಬಿಂದಿಗೆ
ಕಾಡಿನ ಅರಿವು ಮೂಡಿಸುವ ಕಾದಂಬರಿ- ಕಾಡು ಕನಸಿನ ಬೀಡಿಗೆ
“ಕಾಡು ಕನಸಿನ ಬೀಡಿಗೆ” ಕಾದಂಬರಿ ಕುರಿತು ಯುವ ಲೇಖಕ ಮಹೇಶ ಪತ್ತಾರ ಬರಹ..
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಚಂದ್ರಕಾಂತ ಕರದಳ್ಳಿ ಯವರು ಕಲ್ಯಾಣ ಕರ್ನಾಟಕದಲ್ಲಿ ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧಿ ಪಡೆದು ಮಕ್ಕಳ ಮನದಾಳದಲ್ಲಿ
ಮನೆ ಮಾಡಿದ್ದಾರೆ.
ಮೂಲತಃ ಯಾದಗಿರಿ ಜಿಲ್ಲೆಯವರಾದ ಚಂದ್ರಕಾಂತ ಕರದಳ್ಳಿಯವರು ಇದೀಗ ನಮ್ಮೊಂದಿಗೆ ಇರದಿದ್ದರು ಅವರ ಸಾಹಿತ್ಯದ ಕೃಷಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇಂದಿಗೂ ಜೀವಂತವಾಗಿರುವುದು ಹೆಮ್ಮಯ ಸಂಗತಿಯಾಗಿದೆ.
ಚಂದ್ರಕಾಂತ ಕರದಳ್ಳಿಯವರ ಇತ್ತೀಚಿನ “ಕಾಡು ಕನಸಿನ ಬೀಡಿಗೆ” ಎಂಬ ಮಕ್ಕಳ ಕಾದಂಬರಿಯು ರಾಷ್ಟ್ರ ಮಟ್ಟದಲ್ಲಿ ಭಾರಿ ಸದ್ದು ಮಾಡುವ ಮೂಲಕ ” ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪುರಸ್ಕಾರ “ಪಡೆದ ಕಾದಂಬರಿಯಾಗಿದೆ.
ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಮಕ್ಕಳ ಸಾಹಿತ್ಯ ಕೂಡ ವಿಶಿಷ್ಟವಾದದ್ದು. ಮಕ್ಕಳಿಗೆ ಮನಮುಟ್ಟುವಂತೆ ಹಾಗೂ ಮಕ್ಕಳ ಅಂತರಾಳಕ್ಕೆ ಅರ್ಥವಾಗುವಂತಹ ರೀತಿಯಲ್ಲಿ ಬರೆಯುವ ಶೈಲಿ ಅದು ಚಂದ್ರಕಾಂತ ಕರದಳ್ಳಿಯವರದು. ಹೀಗಾಗಿ ಅನೇಕ ಕೃತಿಗಳು ಮಕ್ಕಳಿಗಾಗಿ ಬರೆದಿದ್ದಾರೆ.
ಅದರಲ್ಲಿ ಪ್ರಮುಖವಾಗಿ ಇತ್ತಿಚ್ಚಿನ ಕಾಡು ಕನಸಿನ ಬೀಡಿಗೆ ಕಾದಂಬರಿಯು ಮಕ್ಕಳ ಕಾದಂಬರಿಯಾಗಿದೆ. ಈ ಕಾದಂಬರಿಯು ನಾಡಿನ ಮಕ್ಕಳಿಗೆ ಕಾಡು-ನಾಡು ನಡುವಿನ ಮಹತ್ವದ ಅರಿವು ಮೂಡಿಸಿ ಮಕ್ಕಳಿಗೆ ಕಾಡು ನಾಡು ಉಳಿಸಿ ಬೆಳೆಸುವುದರ ಕುರಿತು ಜಾಗೃತಿ ಮೂಡಿಸಿರುವ ಕಾರ್ಯ ಶ್ಲಾಘನೀಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಹುತೇಕವಾಗಿ ಮೊಬೈಲ್ ಗಳಲ್ಲಿ ಮುಳುಗಿ ಗೇಮ್ ಆಡುವುದರಲ್ಲಿ ತಲ್ಲಿನರಾಗಿರುತ್ತಾರೆ.ಮನೆಯಲ್ಲಿ ಚಿಂಟು ಟಿವಿ ನೊಡುತಾ ಊಟ ಆಟ ಪಾಠ ನಡೆಯುತ್ತಿರುವುದರಿಂದ ಮಕ್ಕಳಿಗೆ ನಾಡು – ಕಾಡಿನ ಮಹತ್ವ ತಿಳಿಯದಾಂತಾಗಿರುವ ಬೇಜಾರದ ಸಂಗತಿಯಲ್ಲಿ ಚಂದ್ರಕಾಂತ ಕರದಳ್ಳಿಯವರು ನಾಡಿನ ಮಕ್ಕಳಿಗೆ ಕಾಡು-ನಾಡು ಹೇಗೆ ? ಇದೆ ಎಂಬ ಕುತೂಹಲವು ಮನದಲ್ಲಿ ಮೂಡಿಸಿ ಮೆಲ್ಲನೆ ಕಾಡು -ನಾಡಿನತ್ತ ಗಮನಹರಿಸಿದ್ದಾರೆ.
ನಾಡಿನ ಮುಗ್ಧ ಮುದ್ದಿನ ಮಕ್ಕಳಿಗೆ ಕಾಡು-ನಾಡಿನ ಕುರಿತು ಪರಿಚಯಿಸುವ ಪೂರ್ವದಲ್ಲಿ ಮಕ್ಕಳ ಮನಸ್ಸು ಸಂತೋಷ ಪಡಿಸಲು ಕಾಡು ನಾಡಿನ ಬಗ್ಗೆ ಸಣ್ಣ- ಪುಟ್ಟ ಹಾಡುಗಳನ್ನು ಬರೆದು ಆ ಹಾಡುಗಳನ್ನು ಹಾಡುತ್ತಾ ಆಡುತ್ತಾ ಕೂಡುತ್ತಾ ನಲಿದಾಡುತ್ತಾ ಮುಂದೆ ಸಾಗುತ್ತಾ ಕಾಡಿನೆಡೆಗೆ ಮಕ್ಕಳು ಕೂತಹಲದಿಂದ ಪಯಣಿಸುವಂತೆ ಮಾಡಿ ಕಾಡಿನಲ್ಲಿರುವ ಪ್ರಾಣಿ ಪಕ್ಷಿ ಗಿಡ ಗಂಟಿ ಹಳ್ಳ-ಕೊಳ್ಳ ಜರಿ ಹೀಗೆ ಹಲವು ರೀತಿಯ ಕಾಡಿನ ಸಂಪತ್ತುಗಳನ್ನು ಅರಿಯಲು ಸರಳ ರೀತಿಯ ಸಾಹಿತ್ಯದ ಮೂಲಕ ಮಕ್ಕಳಿಗೆ ಮನಮುಟ್ಟುವಂತೆ ಕಾಡು-ನಾಡಿನ ಕುರಿತು ಕಾದಂಬರಿಯು ಕಟ್ಟಕೊಟ್ಟಿದ್ದಾರೆ.
“ಬನ್ನಿ ಮಕ್ಕಳೆ ಕಾಡಿಗೆ
ಪರಿಸರ ಎಂಬ ಗೂಡಿಗೆ ನಾಡನು ಕಟ್ಟುವ ನೀವು ಕಾಡನು ಉಳಿಸಬೇಕು ” ಎನ್ನುವ ಸರಳ ಸಾಲುಗಳು ಕಾಡು ತಾಯಿ ಅಧ್ಯಾಯ ೨ ರಲ್ಲಿ ಅದೆಷ್ಟು ಸುಂದರವಾಗಿ ತಿಳಿಸಿದ್ದಾರೆ. ಕಾಡಿನಿಂದ ನಾಡು ಹೇಗೆ ನಡೆಯುತ್ತದೆ ಎಂಬ ಮಕ್ಕಳ ಪ್ರಶ್ನೆಗೆ ಮತ್ತು ಕಾಡಿನಿಂದ ಏನೆಲ್ಲ ಲಾಭಗಳು ಉಂಟು ?ಎಂಬುದು ಓದುಗರ ಆಸಕ್ತಿ ಹೆಚ್ಚಿಸುವುದು ಒಂದು ಕಡೆಯಾದರೆ ಮಕ್ಕಳಿಗೆ ಕಾಡಿನ ಕುರಿತು ಹೊಸದನ್ನು ತಿಳಿದುಕೊಳ್ಳುವ ಹಸಿವು ಮನದಲ್ಲಿ ಪುಟಿಯುವಂತೆ ಮಾಡಿದೆ.
“ಕಾಡು ಅಂದ್ರೆ ಕಾಡು
ಕಾಡು ಇದ್ದರೆ ನಾಡು ಕಾಡಿಗುಂಟು ಕೋಡು
ಗಿಡ-ಗಂಟಿ ಜೋಡು ”
ಈ ಸಾಲುಗಳು ಕಾದಂಬರಿಯ ಕಾಡು ಅಂದ್ರೆ ಕಾಡು ಮೊದಲನೇಯ ಅಧ್ಯಾಯದಲ್ಲಿ ಬಹಳ ಅರ್ಥಪೂರ್ಣವಾಗಿ ಮಕ್ಕಳಿಗೆ ಮನವರಿಕೆ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪರಿಸರ ನಾಶ ಮಾಡುತ್ತಿರುವ ಕಾರ್ಯಗಳೇ ಹೆಚ್ಚಾಗಿ ನಡೆಯುತ್ತಿವೆ. ಮನುಷ್ಯನು ತನ್ನ ಸ್ವಾರ್ಥ,ಸಂತೋಷ ಅತಿ ಆಸೆ, ಲಾಭದಾಯಕ ದೃಷ್ಟಿಕೋನದಿಂದ ಸಂಪೂರ್ಣವಾಗಿ ಪರಿಸರವನ್ನು ನಾಶ ಮಾಡಲು ಮುಂದಾಗಿದ್ದಾನೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪರಿಸರ ಉಳಿಸಿ ಗಿಡ-ಮರಗಳನ್ನು ಬೆಳೆಸಿ ಬೆಟ್ಟ-ಗುಡ್ಡ ಕಾಪಾಡಲು ಮಕ್ಕಳ ಎದೆಯಾಳದಲ್ಲಿ ಅಚ್ಚಳಿಯದಂತೆ ಕಾಡಿನ ಕುರಿತು, ನಮ್ಮನಾಳೆಗಳ ನೆಮ್ಮದಿಗಾಗಿ ಕಾಡು- ನಾಡು ಉಳಿಸಿ ಬೆಳಿಸುವುದು ಮುಖ್ಯವೆಂದು ಕಾಡು ಕನಸಿನ ಬೀಡಿಗೆ ಮಕ್ಕಳ ಕಾದಂಬರಿಯಲ್ಲಿ ಚಂದ್ರಕಾಂತ ಕರದಳ್ಳಿ ಯವರು ಸರಳ ರೀತಿಯಿಂದ ತಿಳಿಸುವ ಮುಖಾಂತರ ನಾಡಿನ ಜನತೆಗೆ ಕಾಡು-ನಾಡಿನ ಕುರಿತು ಜಾಗೃತಿ ಮೂಡಿಸಿದ್ದಾರೆ.
ಈ ಕಾಡು ಕನಸಿನ ಬೀಡಿಗೆ ಮಕ್ಕಳ ಕಾದಂಬರಿಯಲ್ಲಿ
ಕಾಡು ಅಂದ್ರೆ ಕಾಡು ಕಾಡು ತಾಯಿ, ಗಿರಿ ಕಂದರ ಗಳಿಂದ ಹರಿದ ಝರಿ ,ನೀರಿನಿಂದ ಕಾಡಿನೊಳಗೆ, ಹರಿವ ತೊರೆಯ ದಾಟಿ, ಕಾಡಿನಲ್ಲಿ ದಾರಿ,ಕಾಡು ದಾರಿಯಲ್ಲಿ ಕಂಡ ನೋಟ ,ಕಾಡು ದಾರಿಯಿಂದ ಅಂಚಿಗೆ ,ಕಾಡಿಗೆ ಕಾಡಿತ್ತು ಭಯ ಕಾಡಿನಿಂದ ಮರಳಿ ನಾಡಿಗೆ , ಮುಂತಾದ 10 ಅಧ್ಯಾಯಗಳಿಂದ ಕೂಡಿರುವ ಈ ಕಾದಂಬರಿಯಲ್ಲಿ ಪ್ರತಿಯೊಂದು ಅಧ್ಯಾಯದಲ್ಲಿ ಮಕ್ಕಳಿಗೆ ಹಂತ ಹಂತವಾಗಿ ಕಾಡಿನ ಕುರಿತು ತಿಳಿಸಿದ್ದಾರೆ.
ಕಾಡಿನಲ್ಲಿನ ಹಸಿರು ಮರಗಳನ್ನು ಪ್ರಾಣಿಗಳನ್ನು ಮನುಷ್ಯರು ಬೇಟೆಯಾಡುವುದು, ಅದರಿಂದ ಆಗುವ ದುಷ್ಪರಿಣಾಮಗಳೇನು ?ಬಹುಮುಖ್ಯವಾಗಿ ಸಮಗ್ರ ಪರಿಸರದಲ್ಲಾಗುವ ಏರುಪೇರುಗಳನ್ನು ಹಂತ ಹಂತವಾಗಿ ಒಂದೊಂದು ಅಧ್ಯಾಯದಲ್ಲಿ ದಾಖಲಿಸಿದ್ದಾರೆ.
ಅಷ್ಟೇ ಅಲ್ಲ ಈ ಕಾದಂಬರಿಯ ಓದು ಮಕ್ಕಳಲ್ಲಿ ಕೇವಲ ಪರಿಸರದ ಕುರಿತು ಅರಿವುನ್ನು ಮೂಡಿಸುವುದು ಅಷ್ಟೇ ಅಲ್ಲ ಮಕ್ಕಳ ಮನಸ್ಸು ಕುಣಿದಾಡುವಂತೆ ಮಾಡುತ್ತದೆ. ಅದು ಹೇಗೆ ಎನ್ನುವುದನ್ನು ಮುಂದಿನ ಪುಟಗಳನ್ನು ತಿರುವ ಹಾಕಿದಾಗಲೇ ಗೊತ್ತಾಗುತ್ತದೆ. ಕಾಡಿನಂಚಿನಲ್ಲಿ ಪ್ರಾಣಿಗಳಿಗೆ ಹೊಂದಿಕೊಂಡು ಜೀವನ ಸಾಗಿಸುವ ಮಂದಿ ಜೀವನೋಪಾಯಕ್ಕೆ ಕಾಡನ್ನು ಅವಲಂಬಿಸಿರುವ ಬದುಕಿನ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಕರದಳ್ಳಿಯವರು ತಮ್ಮ ಲೇಖನಿಯನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ ಎಂದು ಬೆಂಗಳೂರಿನ ಲೇಖಕರಾದ ಹ.ಸ.ಬ್ಯಾಕೋಡ ಅವರು ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಮಕ್ಕಳ ಸಾಹಿತ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಫಲವಾಗಿ ಚಂದ್ರಕಾಂತ್ ಕರದಳ್ಳಿಯವರದು ನಿರಂತರ ಸೃಜನಶೀಲ ಹುಡುಕಾಟ ಕರಿಮಣಿ ಸರದೊಳು ಕೆಂಪು ಹವಳದಂತೆ ಈ ಕಾದಂಬರಿಯ ಗದ್ಯದಲ್ಲಿ ಪದ್ಯಗಳು ಮೈದಾಳಿವೆ. ಇಂತಹದೊಂದು ಹೊಸ ಪ್ರಯೋಗವನ್ನು ಒಕ್ಕಣ್ಣಿನ ವಿಮರ್ಶಕರು ಗಮನಿಸಲಿ ಆಗ ಅವರ ಎರಡು ಕಣ್ಣುಗಳು ಸರಿಯಾಗಿ ಕಾಣಬಹುದು.
ಗಮನಿಸಲಿ ಬಿಡಲಿ ಮಕ್ಕಳಿಗಂತೂ ಇದು ಖುಷಿಯನ್ನು ಒಂದು ಆದರ್ಶವನ್ನು ಕಟ್ಟಿ ಕೊಡುತ್ತದೆ .ಈ ನಿಟ್ಟಿನಲ್ಲಿ ಇದೊಂದು ಸಾರ್ಥಕ ಪ್ರಯತ್ನವೆಂದು ಗುಡಿಹಳ್ಳಿ ನಾಗರಾಜ ಅವರು ಬೆನ್ನುಡಿಯಲ್ಲಿ ಹಾರೈಸಿದ್ದಾರೆ.
ಸಕಲ ಜೀವರಾಶಿಗೂ ಆಶ್ರಯ ತಾಣವಾಗಿರುವ ಎಲ್ಲರಿಗೂ ಬದುಕಲು ಬಾಳಲು ಅವಕಾಶ ಮಾಡಿಕೊಟ್ಟಿರುವ ಕಾಡು-ನಾಡಿನ ಕುರಿತು ಅದ್ಭುತವಾಗಿ ಮಕ್ಕಳ ಕಾದಂಬರಿಯನ್ನು ಕಟ್ಟಿಕೊಟ್ಟಿರುವ ಚಂದ್ರಕಾಂತ ಕರದಳ್ಳಿಯವರ ಬರಹ ಮಕ್ಕಳ ಹೊಸತನಕ್ಕೆ ಹಾದಿಯಾಗಿದೆ.
-ಮಹೇಶ್ ಕೆ.ಪತ್ತಾರ
ದೋರನಹಳ್ಳಿ
9902777109
ಚಂದ್ರಕಾಂತ ಕರದಳ್ಳಿ ಸರ್ ಅವರ ಕಾದಂಬರಿ ಕುರಿತು ಮಹೇಶ್ ಪತ್ತಾರ ಅವರು ಚೆನ್ನಾಗಿ ನಿರೂಪಿಸಿದ್ದಾರೆ. ಒಳ್ಳೆಯ ಪ್ರಯತ್ನ.
ಮಹೇಶ್ ಪತ್ತಾ ದೊರನಹಳ್ಳಿ, ಯುವ ಸಾಹಿತ್ಯಕ್ಕೆ ಒಂದು ನಕ್ಷ ತ್ರವೇ ಸರಿ, ಕಾಡು ಕನಿಸಿನ ಬೀಡಿಗೆ ,ಎಂಬ ಚಂದ್ರಶೇಖರ್ ಕರದಳ್ಳಿ ಸರ್ ಬರೆದಿರುವ ಅದಾರಿತ ಕುರಿತು ತುಂಬಾನೇ ಸುಂದರವಾಗಿ ವರ್ಣಸಿ ಬರೆದಿದ್ದಾರೆ ತುಂಬಾ ಧನ್ಯವಾದಗಳು.
ನಿಮ್ಮ ರಾಜು ಬೋಮ್ನ ಶಹಾಪುರ.