ಪ್ರಮುಖ ಸುದ್ದಿ
ಲಾರಿಗೆ ಬೈಕ್ ಡಿಕ್ಕಿ ಸವಾರ ಸಾವು
ಲಾರಿಗೆ ಬೈಕ್ ಡಿಕ್ಕಿ ಸವಾರ ಸಾವು
ಶಹಾಪುರಃ ಹೆದ್ದಾರಿ ಪಕ್ಕದಲ್ಲಿ ಪಂಚರ್ ಆಗಿ ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲೂಕಿನ ರಸ್ತಾಪುರ ಕ್ರಾಸ್ ಹತ್ತಿರ ಶನಿವಾರ ನಡೆದಿದೆ.
ಮೃತ ಯುವಕ ಹಳಿಸಗರ ನಿವಾಸಿ ಮಲ್ಲಿಕಾರ್ಜುನ (28) ಎಂದು ಗುರುತಿಸಲಾಗಿದೆ.
ಈತ ಸುರಪುರದಿಂದ ತನ್ನ ಕೆಲಸ ಮುಗಿಸಿಕೊಂಡು ಶಹಾಪುರಕ್ಕೆ ಬರುವಾಗ ಮಾರ್ಗ ಮಧ್ಯೆ ದುರ್ಘಟನೆ ನಡೆದಿದೆ.ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.