Homeಅಂಕಣಜನಮನಮಹಿಳಾ ವಾಣಿವಿನಯ ವಿಶೇಷ

ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ..?

ತಜ್ಞರು ಹೇಳುವ ಪ್ರಕಾರ ಒಬ್ಬ ಮನುಷ್ಯ ಪ್ರತಿ ದಿನ 6 ರಿಂದ 8 ಗ್ಲಾಸ್ ನೀರು ಕುಡಿಯಬೇಕು. ಇದು ಬಲವಂತದ ಹೇಳಿಕೆಯಲ್ಲ. ಏಕೆಂದರೆ ಮನುಷ್ಯನ ದೇಹ ಆಂತರಿಕವಾಗಿ ಮುಕ್ಕಾಲು ಪಾಲು ನೀರಿನ ಅಂಶವನ್ನೇ ಹೊಂದಿದೆ. ಆದರೆ ಬೇಸಿಗೆ ದಿನಗಳಲ್ಲಿ ಈ ನೀರಿನ ಅಂಶ ಇದ್ದಕ್ಕಿದ್ದಂತೆ ಬೆವರಿನ ರೂಪದಲ್ಲಿ ದೇಹದಿಂದ ಹೊರಗೆ ಹರಿದು ಬರುತ್ತದೆ. ಇಂತಹ ಸಮಯದಲ್ಲಿ ಮನುಷ್ಯನು ನಿರ್ಜಲೀಕರಣದ ಸಮಸ್ಯೆಯಿಂದ ತನ್ನ ದೇಹದ ಕೆಲವೊಂದು ಅಂಗಗಳು ಅವಶ್ಯಕತೆಗೆ ತಕ್ಕಂತೆ ಕಾರ್ಯ ನಿರ್ವಹಿಸದೆ ಹಲವಾರು ಕಾಯಿಲೆಗಳನ್ನು ತಾನಾಗಿಯೇ ತಂದುಕೊಳ್ಳುತ್ತಾನೆ.

ಹಾಗಾಗಿ ವೈದ್ಯರ ಬಳಿ ಹೋದಂತಹ ಸಂದರ್ಭದಲ್ಲಿ ಅವರು ಹೆಚ್ಚು ನೀರು ಸೇವಿಸಲು ಸೂಚಿಸುತ್ತಾರೆ. ಆದರೆ ಬರೀ ನೀರು ಕುಡಿಯಲು ಯಾರೂ ಅಷ್ಟಾಗಿ ಮುಂದೆ ಬರುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಕೆಲವು ಸೌತೆಕಾಯಿ ಚೂರುಗಳನ್ನು ಹಾಕಿ ಟಿಪಾಯಿಸಿ ಕುಡಿಯುವುದರಿಂದ ನೀರಿನ ರುಚಿಯೂ ಹೆಚ್ಚುತ್ತದೆ ಮತ್ತು ದೇಹಕ್ಕೆ ನೀರಿನ ಅಂಶ ಸೇರಿದ ರೀತಿಯೂ ಆಗುತ್ತದೆ. ವಿಷಕಾರಿ ಅಂಶಗಳು ದೇಹದಿಂದ ದೂರ ಸೌತೆಕಾಯಿಯಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಕೇವಲ ಮನುಷ್ಯನ ದೇಹಕ್ಕೆ ನಿರ್ಜಲೀಕರಣದ ಸಮಸ್ಯೆಯಿಂದ ಮುಕ್ತ ಮಾಡುವುದಲ್ಲದೆ ತನ್ನಲ್ಲಿನ ಆಂಟಿ – ಆಕ್ಸಿಡೆಂಟ್ ಅಂಶಗಳಿಂದ ದೇಹದಲ್ಲಿ ಕಂಡು ಬರುವ ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡಿ ದೇಹದಿಂದ ವಿಷಪೂರಿತ ಅಂಶಗಳನ್ನು ಹೊರ ಹಾಕಲು ಸಹಾಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಸೌತೆಕಾಯಿ ಮನೆಮದ್ದು ನಿಮ್ಮ ದೇಹದ ತೂಕ ಏನೇ ಮಾಡಿದರೂ ಕಡಿಮೆ ಆಗದಿದ್ದ ಪಕ್ಷದಲ್ಲಿ ನೀವು ಬೇಸತ್ತು ಹೋಗಿದ್ದರೆ, ಸೌತೆಕಾಯಿ ಮಿಶ್ರಿತ ನೀರನ್ನು ಕುಡಿಯುವುದರಿಂದ ನಿಮ್ಮ ದೇಹದ ಕ್ಯಾಲೋರಿಗಳು ತಗ್ಗುತ್ತವೆ.

ಇದುವರೆಗೂ ನೀವು ಸೇವಿಸುತ್ತಿದ್ದ ಸಕ್ಕರೆಯುಕ್ತ ಮತ್ತು ಸೋಡಾ ಬೆರೆಸಿದ ನೀರಿನ ಬದಲು ಒಮ್ಮೆ ಸೌತೆಕಾಯಿ ಮಿಶ್ರಿತ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕೇವಲ ಕೆಲವೇ ತಿಂಗಳುಗಳಲ್ಲಿ ಒಳ್ಳೆಯ ಫಲಿತಾಂಶ ಕಾಣುವಿರಿ. ಸೌತೆಕಾಯಿ ಕ್ಯಾನ್ಸರ್ ನಿವಾರಕ ಹೌದು. ಕೆಲವು ಅಧ್ಯಯನಗಳು ಇದು ನಿಜ ಎಂದು ಹೇಳುತ್ತಿವೆ. ಏಕೆಂದರೆ ಸೌತೆಕಾಯಿಯಲ್ಲಿ ನಿಮ್ಮ ದೇಹವನ್ನು ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ರಕ್ಷಣೆ ಮಾಡುವ ಅಂಶಗಳಾದ cucurbitacins ಮತ್ತು ಪೌಷ್ಟಿಕಾಂಶಗಳ ಗುಂಪು ಎಂದು ಕರೆಸಿಕೊಂಡ lignans ಅಂಶಗಳು ಅಡಗಿವೆ. ಫ್ಲೇವನಾಯ್ಡ್ fisetin ಎಂಬ ನಾರಿನ ಅಂಶ ಸೌತೆಕಾಯಿಯಲ್ಲಿದ್ದು, ಪ್ರೊಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ ಲಕ್ಷಣಗಳನ್ನು ಪಡೆದಿರುತ್ತದೆ. ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ ಮನುಷ್ಯನಿಗೆ ತನ್ನ ದೇಹದಲ್ಲಿ ಹರಿಯುವ ರಕ್ತದ ಸಂಚಾರದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾದರೆ, ಅದು ಆತನ ದೇಹದ ರಕ್ತದ ಒತ್ತಡದ ಮೇಲೆ ನೇರವಾದ ಪರಿಣಾಮ ಬೀರಿ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ. ಇಂತಹ ಸಮಯದಲ್ಲಿ ಸೌತೆಕಾಯಿಯ ಸೇವನೆ ನಿಜಕ್ಕೂ ಅದ್ಭುತವಾಗಿ ಒಳ್ಳೆಯ ಪ್ರಯೋಜನ ತಂದುಕೊಡುತ್ತದೆ.

ಏಕೆಂದರೆ ಸೌತೆಕಾಯಿಯಲ್ಲಿ ಪೊಟ್ಯಾಶಿಯಂ ಎಂಬ ಎಲೆಕ್ಟ್ರೋಲೈಟ್ ಅಂಶವಿದ್ದು, ಇದು ಮೂತ್ರ ಪಿಂಡಗಳಲ್ಲಿನ ಸೋಡಿಯಂ ಅಂಶದ ಮಟ್ಟವನ್ನು ನಿಯಂತ್ರಣ ಮಾಡುತ್ತದೆ. ಆದ್ದರಿಂದ ಹೆಚ್ಚಾಗಿ ಸೌತೆಕಾಯಿ ಮಿಶ್ರಿತ ನೀರು ಅಥವಾ ಸೌತೆಕಾಯಿ ಜ್ಯೂಸ್ ಕುಡಿಯು ವುದರಿಂದ ದೇಹದಲ್ಲಿ ಪೊಟ್ಯಾಷಿಯಂ ಅಂಶ ಹೆಚ್ಚಾಗಿ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಬಹಳಷ್ಟು ಉತ್ತಮವಂತೆ ಸೌತೆಕಾಯಿಯಲ್ಲಿ ವಿಟಮಿನ್ ‘ ಕೆ ‘ ಅಂಶ ಬಹಳಷ್ಟಿದ್ದು, ಇದು ಆರೋಗ್ಯಕರ ದೇಹಕ್ಕೆ ಮತ್ತು ಮೂಳೆಗಳಿಗೆ ಅಗತ್ಯವಾಗಿ ಬೇಕಾದ ಪ್ರೋಟಿನ್ ಅಂಶಗಳನ್ನು ಒದಗಿಸುತ್ತದೆ. 1 ಕಪ್ ಹೆಚ್ಚಿದ ಸೌತೆಕಾಯಿ ಮನುಷ್ಯನ ದಿನದ ಅಗತ್ಯ ಎನಿಸಿಕೊಂಡ ಸುಮಾರು 19 % ನಷ್ಟು ವಿಟಮಿನ್ ‘ ಕೆ ‘ ಅಂಶವನ್ನು ಒದಗಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇಷ್ಟೆಲ್ಲಾ ಪ್ರಯೋಜನಗಳುಳ್ಳ ಸೌತೆಕಾಯಿ ಮಿಶ್ರಿತ ನೀರನ್ನು ಈ ರೀತಿ ತಯಾರು ಮಾಡೋಣ ಸೌತೆಕಾಯಿ ಜ್ಯೂಸ್ ತಯಾರು ಮಾಡಲು ಬೇಕಾಗಿರುವ ಸಾಮಗ್ರಿಗಳು

Related Articles

Leave a Reply

Your email address will not be published. Required fields are marked *

Back to top button