ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯಾ? ಹಾಗಿದ್ರೆ ತಪ್ಪದೆ ಈ ಕೆಲಸ ಮಾಡಿ

(Ration Card Delete) ರಾಜ್ಯ ಅಥವಾ ಕೇಂದ್ರ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಮುಖ್ಯ. ಅದರಲ್ಲೂ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ರೇಷನ್ ಮುಖ್ಯವಾಗಿದೆ. ಅಲ್ಲದೆ ಯಾವುದೇ ಸೌಲಭ್ಯ ಅಥವಾ ಸಹಾಯಧನ ಪಡೆಯಲು ರೇಷನ್ ಕಾರ್ಡ್ ಮುಖ್ಯವಾಗಿದೆ. ಹೀಗಾಗಿ ಎಲ್ಲರೂ ರೇಷನ್ ಕಾರ್ಡ್ ಹೊಂದಿರುತ್ತಾರೆ.
ಈ ರೇಷನ್ ಕಾರ್ಡ್ ನಲ್ಲಿ ಬಡತನದ ರೇಖೆಗೆ ಬರುವವರಿಗೆ BPL ರೇಷನ್ ಕಾರ್ಡ್ ಗಳನ್ನು ನೀಡಲಾಗುತ್ತದೆ. ಬಡತನದ ರೇಖೆಗಿಂತ ಜಾಸ್ತಿ ಇರುವವರಿಗೆ APL ರೇಷನ್ ಕಾರ್ಡ್ ಕೊಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳು, ಉಚಿತ ರೇಷನ್, ಉಚಿತ ಆರೋಗ್ಯ ಸೇವೆ, ಸರ್ಕಾರದ ಇನ್ನಿತರ ಯೋಜನೆಗಳು ಈ ಎಲ್ಲದರ ಸೌಲಭ್ಯ ಕೂಡ ಸಿಗುತ್ತದೆ.
ಆದರೆ ಇಂತಹ ಸೌಲಭ್ಯವನ್ನು ಪಡೆಯಲು ಬಡತನದ ರೇಖೆಕ್ಕಿಂತ ಮೇಲಿರುವವರು ಕೂಡ ನಕಲಿ ದಾಖಲೆಗಳು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ ಸರ್ಕಾರ ನಕಲಿ ದಾಖಲೆ ನೀಡಿ ಬಿಪಿಎಲ್ ರೇಷನ್ ಪಡೆದವರ ಕಾರ್ಡ್ ಅನ್ನು ರದ್ದು ಮಾಡುತ್ತಿದೆ. ಒಂದು ವೇಳೆ ನೀವು ಬಡತನದ ರೇಖೆಕ್ಕಿಂತ ಕೆಳಗೆ ಇದ್ದು ರೇಷನ್ ಕಾರ್ಡ್ ಡಿಲೀಟ್ ಆಗಿದ್ದರೆ ಈ ರೀತಿ ಮಾಡಿ ನಿಮ್ಮ ರೇಷನ್ ಕಾರ್ಡ್ ಅನ್ನು ಮತ್ತೆ ಪಡೆಯಬಹುದಾಗಿದೆ.
ಹೌದು, ಬಿಪಿಎಲ್ ರೇಷನ್ ಕಾರ್ಡ್ ರದ್ದಾಗಿದ್ದಾರೆ ನೀವು ಬಡತನದ ರೇಖೆಕ್ಕಿಂತ ಕೆಳಗೆ ಇರುವುದು ಎಂದು ದಾಖಲೆಯನ್ನು ನೀಡಿ ಮತ್ತೆ ರೇಷನ್ ಕಾರ್ಡ್ ಅನ್ನು ಪಡೆಯಬಹುದಾಗಿದೆ.
ಹಾಗಾದರೆ ಬಿಪಿಎಲ್ ರೇಷನ್ ಕಾರ್ಡ್ ಹೊಂದಲು ಮಾನದಂಡವೇನು?:
* ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತಲೂ ಹೆಚ್ಚಿರಬಾರದು.
* ವೈಟ್ ಬೋರ್ಡ್ನ ನಾಲ್ಕು ಚಕ್ರದ ವಾಹನ ಉಳ್ಳವರರು ಆಗಿರಬಾರದು.
* ಐಟಿ ರಿಟರ್ನ್ ಪಾವತಿಸುವವರು ಆಗಿರಬಾರದು.
* ಹಳ್ಳಿಯಲ್ಲಿ 3 ಹೆಕ್ಟೆರ್ ಒಣಭೂಮಿ/ ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು ಆಗಿರಬಾರದು.
* ನಗರ ಪ್ರದೇಶಗಳಲ್ಲಿ 1000 ಚದರ ಅಡಿ ವಿಸ್ತಿರ್ಣದ ಸ್ವಂತ ಮನೆ ಹೊಂದಿರುವವರು ಅರ್ಹರಲ್ಲ.
* ಸರ್ಕಾರಿ, ಅರೆಸರ್ಕಾರಿ ಉದ್ಯೊಗದಲ್ಲಿರುವರಿಗೂ ಅರ್ಹತೆಯಿಲ್ಲ.