ಸಚಿವ ಡಿ.ಕೆ.ಶಿ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ!
ಬೆಂಗಳೂರು: ಸದಾಶಿವ ನಗರದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ ನಿವಾಸ ಹಾಗೂ ಡಿಕೆಶಿ ಸಹೋದರರಾದ ಸಂಸದ ಡಿ.ಕೆ.ಸುರೇಶ್ ಮತ್ತು ಆಪ್ತರ ಮನೆಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿಆರ್ ಪಿಎಫ್ ಯೋಧರ ಬಿಗಿ ಭದ್ರತೆಯೊಂದಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ. 4 ತಂಡಗಳಲ್ಲಿ 80 ಜನ ಐಟಿ ಅಧಿಕಾರಿಗಳ ತಂಡ ವಿವಿದೆಡೆ ದಾಳಿ ನಡೆಸಿದೆ.
ಮತ್ತೊಂದು ಕಡೆ ರಾಮನಗರದ ಬಿಡದಿ ಬಳಿ ಗುಜರಾತಿನ ಶಾಸಕರು ತಂಗಿರುವ ಈಗಲ್ ಟನ್ ರೆಸಾರ್ಟ್ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಇಲಾಖೆಯ ವಾಹನಗಳು ಸೇರಿದಂತೆ ಹೊರ ಹೋಗುವ, ಒಳ ಬರುವ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದಾರೆ.
ಇದೇ ಆಗಷ್ಟ್ 08ಕ್ಕೆ ಗುಜರಾತಿನಿಂದ ರಾಜ್ಯಸಭೆಗೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಆಪರೇಷನ್ ಕಮಲದ ಭೀತಿಯಿಂದ ಕಾಂಗ್ರೆಸ್ ಹೈಕಮಾಂಡ್ ಈ ತಂತ್ರ ಹೂಡಿತ್ತು. ಸಚಿವ ಡಿ.ಕೆ.ಶಿವಕುಮಾರ್ ಗೆ ಗುಜರಾತ್ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿ ನೀಡಲಾಗಿತ್ತು.
Good job & c.m mane melle dalli madalli….