ಡಾ.ಪುಟ್ಟರಾಜರು ನೆಲದ ಮೇಲಿನ ನಕ್ಷತ್ರವಿದ್ದಂತೆ ಡಾ. ಶರಣು ಗದ್ದುಗೆ ಬಣ್ಣನೆ
ಯಾದಗಿರಿಃ ಕಲಾವಿದರ ಪಾಲಿನ ಕಣ್ಣು, ಅಂಧ ಅನಾಥರ ಮಹಾನ್ ಚೇತನ ಡಾ.ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ. ಶರಣು.ಬಿ ಗದ್ದುಗೆ ಅಭಿಪ್ರಾಯಪಟ್ಟರು.
ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಜ್ಯೋತಿರ್ಗಮಯ ಸೇವಾ ಸಂಸ್ಥೆಯ ವತಿಯಿಂದ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ 104ನೇ ಜನ್ಮದಿನೋತ್ಸವ ಅಂಗವಾಗಿ ಆಯೋಜಿಸಿದ್ದ ಗೀತಗಾಯನ ಹಾಗೂ ಕಥಾ ಕೀರ್ತನ ಮತ್ತು ಸಾಂಸ್ಕೃತಿಕ ಸಿರಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಲೋಕದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ.ಪುಟ್ಟರಾಜರು, ಸಾವಿರಾರು ಅಂಧರಿಗೆ ಶಿಕ್ಷಣ ನೀಡುವುದರ ಮೂಲಕ ಅಂಧರ ಪಾಲಿಗೆ ದೇವರಾಗಿದ್ದರು. ನೆಲದ ಮೇಲಿನ ನಕ್ಷತ್ರವಾಗಿದ್ದರು ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಜ್ಯೋತಿರ್ಗಮಯ ಸೇವಾ ಸಂಸ್ಥೆವತಿಯಿಂದ ಡಾ.ಶರಣು ಬಿ. ಗದ್ದುಗೆಯವರಿಗೆ ಸಾಂಸ್ಕೃತಿಕ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗ್ರಾಮದ ಹಿರಿಯರಾದ ವೀರಸಂಗಣ್ಣ ದೇಸಾಯಿ, ಷಣ್ಮುಖಪ್ಪ ಕಕ್ಕೇರಿ, ಶರಣಪ್ಪ ದಿಗ್ಗಿ, ಚಂದ್ರಶೇಖರ ಪತ್ತಾರ, ಸೈಫಾನ್ ಕೆಂಭಾವಿ, ವಿಶಾಲ ಸಿಂಧೆ, ಕಲ್ಲಪ್ಪ ಖಾನಾಪೂರ, ಮೌನೇಶ ಕಂಚಾಗಾರ, ರಾಘವೇಂದ್ರ ದೇಸಾಯಿ, ಮಹಾದೇವಪ್ಪ ಹುಡೇದ, ಸಾಬರೆಡ್ಡಿ ರಸ್ತಾಪೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಯವ ಸಂಗೀತ ಕಲಾವಿದರಾದ ಶರಣು ವಠಾರ, ಬೂದಯ್ಯ ಹಿರೇಮಠ, ಗಣೇಶ ಪೋಲಿಸ್, ಮಲ್ಲಯ್ಯ ಹಿರೇಮಠ, ಕಾಳಪ್ಪ ವಡಿಗೇರಾ, ಮಹೇಶ ಶಿರವಾಳ ಗೀತಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷ ಮಹೇಶ ಪತ್ತಾರ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಕಥಾ ಕೀರ್ತನವನ್ನು ಸುಷ್ರಾವ್ಯವವಾಗಿ ಹಾಡಿದರು. ಚಂದ್ರಕಲಾ ಕರಿಗುಡ್ಡ ನಿರೂಪಿಸಿದರು. ಶ್ಯಾವiಲಾ ಕಶೆಟ್ಟಿ ಸ್ವಾಗತಿಸಿದರು. ಸುಧಾ ವಂದಿಸಿದರು.
ಮನಸೂರೆಗೊಂಡ ಗೀತ ಗಾಯನ..
“ನಾದವಿಲ್ಲದ ಬದುಕೆ ಬದುಕಲ್ಲವಂತೆ …………. ಪುಟ್ಟರಾಜ ಗುರುವರ ಶಿವನ ಅವತಾರಿನಿ” …… ಎಂಬ ಹಾಡಿನ ಮೂಲಕ ಕಲಾವಿದ ಬೂದಯ್ಯ ಹಿರೇಮಠರು ಹಾಡುವ ಮೂಲಕ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದರು. ಅದೇ ರೀತಿ “ಪಾಪದ ಫಲವೇ ದುಖಃ ಪುಣ್ಯದ ಫಲವೇ ಸುಖ” …….. ಎಂಬ ಗೀತೆಯನ್ನು ಶರಣು ವಠಾರ ಅವರು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇವರ ಈ ಗಾಯನ ನೆರೆದ ಜನರ ಗಮನಸೆಳೆಯಿತು ಅಲ್ಲದೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಬಂದ ಗುರುವರ ಎಂಬ ಗೀತೆಯನ್ನು ಗಣೇಶ ಪೋಲಿಸ್‍ರವರು ಅಷ್ಟೆ ಸುಂದರವಾಗಿ ಭಕ್ತಿಪೂರ್ವಕವಾಗಿ ಹಾಡಿದರು. ಗೀತ ಗಾಯನ ನೆರೆದ ಜನರ ಮನಸೂರೆಗೊಳ್ಳುವಂತೆ ಮಾಡಿತು.