ಯಾದಗಿರಿ ಲಾಕ್ಡೌನ್ ಜಾರಿಃ ಏನಿರುತ್ತೇ ಏನಿರಲ್ಲ.!
ಯಾದಗಿರಿ ಲಾಕ್ಡೌನ್ ಜಾರಿಃ ಏನಿರುತ್ತೇ ಏನಿರಲ್ಲ.!
ಯಾದಗಿರಿಃ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕಾಗಿ ಜುಲೈ 15 ರ ರಾತ್ರಿ 8 ಗಂಟೆಯಿಂದ ಜುಲೈ 22 ರ ರಾತ್ರಿ 8 ಗಂಟೆಯವರೆಗೆ ಜಿಲ್ಲಾದ್ಯಂತ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.
ನಿನ್ನೆಯಿಂದ ಯಾದಗಿರಿ ಜಿಲ್ಲಾಧಿಕಾರಿಗಳ ಸಹಿ ಮತ್ತು ಮೊಹರು ಇರದ ಆದೇಶ ಪತ್ರವೊಂದು ಲಾಕ್ ಡೌನ್ ಘೋಷಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಗೊಂದಲ ಸೃಷ್ಟಿಯಾಗಿತ್ತು. ಅಲ್ಲದೆ ನಾಗರಿಕರು ಮಾಧ್ಯಮದವರಿಗೆ ಕರೆ ಮಾಡಿ ಲಾಕ್ ಡೌನ್ ನಿಜನಾ ಆದೇಶ ಪ್ರತಿ ಹಾಕಿರುವದಕ್ಕೆ ಮೊಹರು ಸಹಿ ಇಲ್ವಲ್ಲ ಎಂಬ ಇತ್ಯಾದಿ ಪ್ರಶ್ನೆಗಳು ಉದ್ಭವಿಸಿದ್ದವು.
ಸಂಜೆವರೆಗೆ ಜಿಲ್ಲಾಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದಂತೆ ಖುದ್ದಾಗಿ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಜಾರಿಗೊಳಿಸಿರುವ ಕುರಿತು ಅಧಿಕೃತ ಆದೇಶ ಹೊರಡಿಸಿದರು.
ಆದೇಶದಲ್ಲಿ ತಿಳಿಸಿರುವಂತೆ, ದಿನಸಿ, ತರಕಾರಿ, ಹಣ್ಣು ಹಂಪಲು ಮತ್ತು ಹಾಲು, ಪೆಟ್ರೋಲ್ ಬಂಕ್‍ಗಳು ಹಾಗೂ ಅತ್ಯವಶ್ಯಕ ಇನ್ನಿತರ ಅಂಗಡಿಗಳಿಗೆ ಮದ್ಯಾಹ್ನ 1 ಗಂಟೆಯವರೆಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿ ಹಾಗೂ ತೋಟಗಾರಿಕೆ ಸಂಭಧಿಸಿದ ಎಲ್ಲಾ ಚಟುವಟಿಕೆಗಳಿಗೆ ರಸಗೊಬ್ಬರ, ಕೀಟನಾಶಕಗಳು ಮತ್ತು ಬೀಜಗಳ ಉತ್ಪಾದನೆ ವಿತರಣೆ ಮತ್ತು ಚಿಲ್ಲರೆ ಅಂಗಡಿಗಳು ಯಂತ್ರೋಪಕರಣಗಳ ಬಿಡಿಭಾಗಗಳು ಪೂರೈಕೆ ಮತ್ತು ದುರಸ್ತಿ ಸೇರಿದಂತೆ ಅವಶ್ಯಕವಿರುವ ಅಂಗಡಿಗಳು ಜಿಲ್ಲಾದ್ಯಂತ ಮದ್ಯಾಹ್ನ 1 ಗಂಟೆವರೆಗೆ ಮಾತ್ರ ತೆರೆದಿರುತ್ತವೆ.
ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಮತ್ತು ಉದ್ಯೋಗ ಖಾತ್ರಿ ಕೆಲಸಕ್ಕೆ ಯಾವುದೇ ನಿರ್ಬಂಧನೆ ಇರುವಿದಲ್ಲ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ. ಆಸ್ಪತ್ರೆ ಸೇವೆಗಳು, ಪಶು ಆಸ್ಪತ್ರೆಗಳು, ಔಷಧಿ ಅಂಗಡಿಗಳು ಸೇರಿದಂತೆ ಇತ್ಯಾದಿ ತುರ್ತು ಸೇವೆಗಳಿಗೆ ಈ ಆದೇಶ ಅನ್ವಯಿಸುವದಿಲ್ಲ ಎಂದು ತಿಳಿಸಿದ್ದಾರೆ. ಬ್ಯಾಂಕಗಳು, ಪೋಸ್ಟ್ ಆಫೀಸ್‍ಗಳು, ಬಿಎಸ್‍ಎನ್‍ಎಲ್ ಕಚೇರಿಗಳು ಸೇರಿದಂತೆ ಇನ್ನಿತರೆ ಅಗತ್ಯ ಕಚೇರಿಗಳು ಮಾತ್ರ ತೆರೆಯಲಾಗುತ್ತದೆ.
ಬಾರ್ ಆಂಡ್ ರೆಸ್ಟೋರೆಂಟ್, ಲಿಕ್ಕರ್ ಔಟಲೆಟ್ಸ್ ಹೊಟೇಲ್ ಮತ್ತು ಬಟ್ಟೆ ಅಂಗಡಿಗಳು, ಬಂಗಾರದ ಅಂಗಡಿಗಳು, ಟಿ ಸ್ಟಾಲ್, ಪಾನಶಾಪ್‍ಗಳು, ಖಾನಾವಳಿಗಳು ತೆರೆಯಲು ಅವಕಾಶವಿರುವದಿಲ್ಲ. ( ಖಾನಾವಳಿ, ಹೊಟೇಲ್‍ಗಲಿಗೆ ಪಾರ್ಸಲ್, ಹೋಂ ಡೆಲಿವರಿಗೆ ಹೊರತುಪಡಿಸಿ) ಇನ್ನೂ ಟ್ಯಾಕ್ಸಿ, ಆಟೋ ಮತ್ತು ಖಾಸಗಿ ವಾಹನಗಳ ಚಲನೆಯನ್ನಜು ಅಗತ್ಯಗನುಗುಣವಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ಹೇಳಲಾಗಿದೆ.
ಕೆಎಸ್‍ಆರ್‍ಟಿಸಿ ಬಸ್ಸುಗಳ ಸರ್ಕಾರದ ಇತರೆ ಅಗತ್ಯಗನುಗುಣವಾಗಿ ಕಾರ್ಯನಿರ್ವಹಿಸತಕ್ಕದ್ದು. ಸಾರ್ವಜನಿಕ ಉಪಯುಕ್ತತೆಗಳಾದ ನೀರು, ನೈರ್ಮಲ್ಯ, ವಿದ್ಯುತ ಇಲಾಖೆಯ ಅಗತ್ಯ ಸೇವೆಗಳಿಗೆ ಈ ಆದೇಶ ಅನ್ವಯವಾಗುವದಿಲ್ಲ ಎಂದು ತಿಳಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ನೌಕರರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕೆಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.