ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ, ಸಹಾಯಕ್ಕಾಗಿ ಮೊರೆ
ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ತಾಯಿ, ಸಹಾಯಕ್ಕಾಗಿ ಮೊರೆ
ಯಾದಗಿರಿಃ ಮಹಿಳೆಯೋರ್ವಳು ಮೂರು ಗಂಡು ಮಕ್ಕಳಿಗೆ ಶನಿವಾರ ಜನ್ಮ ನೀಡಿದ ಅಚ್ಚರಿಯ ಘಟನೆ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಡೆದಿದೆ.
ಮಹಿಳೆ ಪದ್ಮಮ್ಮ ಎಂಬಾಕೆಯೇ ಮೂರು ಮಕ್ಕಳನ್ನು ಹೆತ್ತ ತಾಯಿಯಾಗಿದ್ದಾಳೆ. ಮಹಿಳೆಗೆ ಮದುವೆಯಾಗಿ ಮಕ್ಕಳಾಗಿರಲಿಲ್ಲ 7 ವರ್ಷದ ನಂತರ ಹೆರಿಗೆಯಾಗಿದೆ ಎನ್ನಲಾಗಿದೆ.
ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದು, ಮೂರು ಗಂಡು ಮಕ್ಕಳು ಆರೋಗ್ಯವಾಗಿವೆ. ಕಳೆದ ವಾರ ರಾಮಸಮುದ್ರ ಗ್ರಾಮದ ಆಶಾ ಕಾರ್ಯಕರ್ತೆಯರಾದ ಮಂಗಳಮ್ಮ, ಮುತ್ತಮ್ಮ ಅವರು ಪದ್ಮಮ್ಮಳನ್ನ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು.
ಆಸ್ಪತ್ರೆಯ ವೈದ್ಯರು ಸೂಕ್ತ ಸಮಯದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಮೂರು ಮಕ್ಕಳನ್ನು ಹೊರ ತೆಗೆದಿದ್ದಾರೆ.
ಮೂರು ಮಕ್ಕಳೆತ್ತ ಪದ್ಮಮ್ಮ ಮತ್ತು ಪತಿ ನಾಗರಾಜ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವವರು. ಮಕ್ಕಳ ಪಾಲನೆ ಪೋಷಣೆ ಈಗ ಸವಾಲಾಗಿದ್ದು, ಚಿಂತಾಕ್ರಾಂತರಾಗಿದ್ದಾರೆ. ತಾಯಿಯಲ್ಲೂ ಮೂರು ಮಕ್ಕಳಿಗಾಗುಚಷ್ಟು ಹಾಲಿನ ಕೊರತೆನ ಇದೆ ಎನ್ನಲಾಗಿದೆ.
ಹೀಗಾಗಿ ದಂಪತಿಗಳು ಸಹಾಯಕ್ಕಾಗಿ ಅಂಗಲಾಚಿದ್ದಾರೆ.
ದಾನಿಗಳು ಸಹಾಯ ಮಾಡಲಿಚ್ವಿಸುವವರು ಪದ್ಮಮ್ಮಳ ಪತಿ ನಾಗರಾಜ ಅವರ ಮೊಬೈಲ್ ಸಂಖ್ಯೆ 78928 44564 ಗೆ ಸಂಪರ್ಕಿಸಬಹುದು. ಖಾತೆಯ ಸವಿವವರ SBI A/C no- 52206440261, IFSC- SBIN0013398.