ಪ್ರಮುಖ ಸುದ್ದಿ
ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟಃ ಮಹಿಳೆ ಸಜೀವ ದಹನ
ತಾಂಡೂರ ಹೊಟೇಲ್ ನಲ್ಲಿ ಸಿಲಿಂಡರ್ ಸ್ಪೋಟಃ ಮಹಿಳೆ ಸಜೀವ ದಹನ
ಯಾದಗಿರಿ: ಹೊಟೇಲ್ ವೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡ ಕಾರಣ ಬೆಂಕಿಹೊತ್ತಿ ಉರಿದ ಪರಿಣಾಮ ಓರ್ವ ಮಹಿಳೆ ಸಜೀವ ದಹನವಾಗಿದ್ದು, ಮೂವರು ಗಾಯಗೊಂಡ ಘಟನೆ ಸಮೀಪದ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ತಾಂಡೂರ ನಗರದ ಅಂಬೇಡ್ಕರ್ ಚೌಕ್ ಹತ್ತಿರದ ಸ್ಪೈಸಿ ಹೊಟೇಲ್ ನಲ್ಲಿ ಮಂಗಳವಾರ ನಡೆದಿದೆ.
ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆ ಗೆ ದಾಖಲು ಮಾಡಲಾಗಿದೆ.
ತಾಂಡೂರನ ಎನ್ ಟಿ ಆರ್ ನಗರದ ನಿವಾಸಿ ಕೋಮಲತಾ (36) ಎಂಬಾಕೆಯೇ ಹೊಟೇಲನಲ್ಲಿ ಸಜೀವ ದಹನವಾಗಿದ್ದಾಳೆ.
ಸ್ಥಳಕ್ಕೆ ತಾಂಡೂರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಂಡೂರ ಠಾಣೆಯ ಸಿಪಿಐ ಪ್ರತಾಪಲಿಂಗಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮನೋಹರ ಹಾಗೂ ರವೀಂದ್ರರೆಡ್ಡಿ ಎಂಬುವವರ ಮಾಲೀಕತ್ವದ ಹೊಟೇಲ್ ಇದಾಗಿದೆ. ತಾಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.