ಪ್ರಮುಖ ಸುದ್ದಿ
ಹಾಸ್ಯನಟ ಮೈಕಲ್ ಮಧು ವಿಧಿವಶ
ಹಾಸ್ಯನಟ ಮೈಕಲ್ ಮಧು ವಿಧಿವಶ
ಬೆಂಗಳೂರಃ ಕನ್ನಡ ಚಿತ್ರರಂಗದ ಹಾಸ್ಯ ನಟ ಮೈಕಲ್ ಮಧು ಬುಧವಾರ ಮದ್ಯಾಹ್ಯ ವಿಧಿವಶರಾದರು.
ಅವರು ಮನೆಯಲ್ಲಿ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಬಿದ್ದಿದ್ದಾರೆ. ತಕ್ಷಣ ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಚಿಕಿತ್ಸೆ ಫಲಕಾರಿಯಾಗದೆ ಮೈಕಲ್ ಮಧು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಮೈಕಲ್ ಜಾಕ್ಸನ್ ಅಭಿಮಾನಿಯಾಗಿದ್ದ ಮಧು ಅವರು ತಮ್ಮದೇ ಶೈಲಿ ಮೂಲಕ ಕನ್ನಡ ಸಿನಿ ರಸಿಕರನ್ನು ರಂಜಿಸಿದ್ದರು. ಅವರು ಮೊದಲು ಓಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. 84 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು.
ನಾಳೆ ಅಂದರೆ ಗುರುವಾರ ಮಧು ಅವರ ಪಾರ್ಥೀವ ಶರೀರವನ್ನು ಕುಟುಂಬಸ್ಥರಿಗೆ ಒಪ್ಪಿಸಲಿದೆ. ಗುರುವಾರವೇ ಅಂತ್ಯಕ್ರಿಯೇ ಜರುಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.