ಜನಮನಪ್ರಮುಖ ಸುದ್ದಿ

ಮರೆಯಾದ ದೈತ್ಯ ಬರಹಗಾರ, ಓದುಗರ ಒಡೆಯ

ಇಂದು ಉದಯವಾಗದ ಪತ್ರಿಕೋದ್ಯಮದ ರವಿ

ವಿವಿ ಡೆಸ್ಕ್ಃ ಹೈ‌ ಬೆಂಗಳೂರ ವಾರ ಪತ್ರಿಕೆಯ ಸಂಪಾದಕ, ದೈತ್ಯ ‌ಬರಹಗಾರ, ಸಂಪಾದಕ, ಅಂಕಣಕಾರ, ಕಾದಂಬರಿಗಾರ, ಕಥೆಗಾರ,‌ ಕ್ರೈಮ್ ಸ್ಟೋರಿ ನಿರೂಪಕ, ನಟ ಹೀಗೆ ಪತ್ರಿಕೋದ್ಯಮದ ಎಲ್ಲಾ ಪ್ರಕಾರಗಳಲ್ಲಿ ತನ್ನದೆ ಛಾಪು ಮೂಡಿಸಿದ್ದ ತನ್ನ ಬರಹ, ಮಾತಿನ ಶೈಲಿ‌ ಮೂಲಕವೇ ಅಪಾರ ಓದುಗರನ್ನು ಸಂಪಾದಿಸಿದ್ದ ರವಿ‌ ಬೆಳೆಗೆರೆ ನಿನ್ನೆ ತಡ ರಾತ್ರಿ‌ ತಮ್ಮ “ಹೈ ಬೆಂಗಳೂರು” ‌ಕಚೇರಿಯಲ್ಲಿಯೇ ಹೃದಯಾಘಾತದಿಂದ ‌ವಿಧಿವಶವಾದರು.

ನಾಡಿನ ಸಾಹಿತ್ಯ ಸಾರತ್ವಲೋಕಕ್ಕೆ ಅಪಾರ‌ ಕೊಡುಗೆ ನೀಡಿದ ಅವರು, ದಾರಿ ತಪ್ಪಿ ಬಂದ ಸಾವಿರಾರು ಯುವಕ‌ ಯವತಿಯರ‌ ಪಾಲಿನ ಮಾರ್ಗದರ್ಶಕರಾಗಿ ಓದುಗರ ಪಾಲಿನ ಒಡೆಯನಾಗಿ, ಜೀವನದಲ್ಲಿ ಉತ್ಸಾಹ ಕಳೆದುಕೊಂಡ ಅದೆಷ್ಟು ಹೃದಯಗಳಿಗೆ ಹತ್ತಿರವಾಗಿ, ತಮ್ಮ ಮಾತು, ಬರಹದ ಮೂಲಕ ಅವರಿಗೆ ಮರು‌ಜನ್ಮ ನೀಡಿದ‌್ದಾರೆ ಎಂದರೆ ತಪ್ಪಿಲ್ಲ.

ಭೀಮಾ ತೀರದ  ಹಂತಕರು,‌ ಹಿಮಾಲಯನ್ ಬ್ಲಂಡರ್, ನೀ‌ ಹಿಂಗ್ ನೋಡಬ್ಯಾಡ‌ ನನ್ನ,‌ ಹೇಳಿ ಹೋಗೋ ಕಾರಣ,‌ ಟೈಂ ಪಾಸ್, ಕಾರ್ಗೀಲ್ ಯುದ್ಧ, ಮಾಟಗಾತಿ, ಇಂದಿರೆಯ‌ , ಮಗ ಸಂಜಯ್, ಕವಿರಾಜ ಮಾರ್ಗ, ಖಾಸ್ ಬಾತ್ ಸರಣಿ ಪುಸ್ತಕಗಳು‌ ಸೇರಿದಂತೆ ಅಪಾರ ಬರಹಗಳು, ಲೇಖನಗಳು ಕ್ರೈಂ ಸ್ಟೋರಿಗಳ ಮೂಲಕ ಜನಜನಿತವಾಗಿದ್ದ ಅವರು, ಕರುನಾಡಿನ ಓದುಗರ ಹೃದಯದಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ಪತ್ರಿಕೋದ್ಯಮದ ದೊರೆಯಾಗಿದ್ದರು.

ಬರಹವೇ ಅವರ ಜೀವನವಾಗಿತ್ತು. ಕೊನೆವರೆಗೂ ಬರೆಯುತ್ತಲೇ ಅವರು‌ ಅಸ್ತಂಗತರಾದರೂ. ಭಾವನಾತ್ಮಕವಾಗಿ‌ ಬರೆಯುವ ಅವರ‌‌ ಬರಹ‌ ಪ್ರತಿ ಓದುಗನ ಮನ ಮಿಡಿಯುವಂತಿತ್ತು. ಬರೆಯಲು ಕುಳಿತರೆ, ರಾತ್ರಿ ಹಗಲೆನ್ನದೆ ಲೆಕ್ಕಿಸದೆ‌ ಕೆಲಸ‌ ಮಾಡುತ್ತಿದ್ದರು. ಹೀಗಾಗಿ ಆತ ಕರುನಾಡು ಕಂಡ ದೈತ್ಯ‌ ಬರಹಗಾರ.

ಪಾಪಿಗಳ ಲೋಕದಲ್ಲಿ, ಬಾಟಂ ಐಟಂ ಹಲವು‌‌ ಕಾಲಂ‌ಗಳು‌ ಪ್ರಸಿದ್ಧಿ ಪಡೆದಂತವು. 2011 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.‌‌ ಮಾಧ್ಯಮಿಕ‌ ಅಕಾಡೆಮಿ ಪ್ರಶಸ್ತಿಯೂ ಪಡೆದಿದ್ದರು. ಯಾವುದೇ ಪ್ರಶಸ್ತಿಗೆ ಕಾಯ್ದು ಕುಳಿತವರು ಅವರಲ್ಲ. ನಾಡಿನ ಸಾರತ್ವಲೋಕಕ್ಕೆ ಅಪಾರ ಕೊಡುಗೆ ನೀಡಿದ ರವಿ‌ ಬೆಳೆಗೆರೆ, 1995 ರಲ್ಲಿ “ಹೈ‌ ಬೆಂಗಳೂರ” ವಾರ ಪತ್ರಿಕೆ ಆರಂಭಿಸಿ ಓದುಗರ ಮನ‌ ಗೆದಿದ್ದರು.

ಅಕ್ಷರ ಲೋಕದ‌ ಒಡೆಯನಾಗಿ‌ ಅಂದಿನಿಂದ ಬೆಳಕು‌ ಚಲ್ಲಿದ ರವಿ‌‌ ಇಂದು‌ ಮರೆಯಾಗಿದ್ದಾರೆ. ಆದರೆ ಅಕ್ಷರ ರೂಪದಲ್ಲಿ ಅವರ ಹೊಳಪು ಎಂದೂ‌ ಮಾಸದಂತಿದೆ. ಅವರು ಬರೆದ ಪ್ರತಿ ಪುಸ್ತಕ ತೆರೆದರೆ ಬೆಳಕು‌ ಮೂಡಲಿದೆ ಎಂಬುದು‌ ಮಾತ್ರ ಸತ್ಯ.

ಬೆಳೆಗೆರೆ ಬಗ್ಗೆ ಬರೆದಷ್ಟು‌ ಮತ್ತೆ ಮತ್ತೆ ಸಂಗತಿಗಳು ಅವರ ಸಾಧನೆಯ ಸರಮಾಲೆ ಎದುರಾಗುತ್ತಲೆ‌ ಇರುತ್ತವೆ. ಎಷ್ಟು ಬರೆದರೂ ಸಾಲದು ಅವರ ಪತ್ರಿಕೋದ್ಯಮದ ರಹದಾರಿ ಸಾಕಷ್ಟು ರೋಚಕ,‌ ನೆನಪಿಸಿಕೊಂಡಷ್ಟು ಸಾಧನೆ ಹೀಗೆ ಸಾಗಲಿದೆ.

ಈ ಅಕ್ಷರ‌ ಬ್ರಹ್ಮನಿಗೊಂದು ಸಲಾಂ‌ ಹೇಳುತ್ತಾ..ಅವರ ಆತ್ಮಕ್ಕೆ‌ ದೇವರು ಚಿರಶಾಂತಿ‌ ನೀಡಲಿ ಎಂದು ಪ್ರಾರ್ಥಿಸುತ್ತಾ, ಕೊನೆಯದಾಗಿ ಅವರ ಹೈ ಬೆಂಗಳೂರು ಪತ್ರಿಕೆ ಓದುತ್ತಲೇ ನಾನು ಕೂಡ ಪತ್ರಿಕೋದ್ಯಮಕ್ಕೆ‌ ಅಂಬೆಗಾಲಿಟ್ಟವರು,‌‌ ಪ್ರಶ್ನೆ ಕೇಳಿ ಕಾಲಂಗೆ ಸಾಕಷ್ಟು ಬಾರಿ‌ ಪ್ರಶ್ನೆಗಳನ್ನು‌ ಬರೆದು ಕಳುಹಿಸಿದವರು. ನಂತರ “ಓ ಮನಸೇ” ಪಾಕ್ಷಿಕ ಪತ್ರಿಕೆಗೂ ಕವನ, ನನ್ನ ಸಹೋದರನ ಲೇಖನಗಳು ಪ್ರಕಟಿಸಿದ್ದರು.‌

ರವಿ ಬೆಳೆಗೆರೆಯ ಬರಹಕ್ಕೆ ಮನಸೋತ ಲಕ್ಷಾಂತರ‌ ಓದುಗರಲ್ಲಿ ನಾನು ಒಬ್ಬ ಅವರಿಗಿದೋ ಅಂತಿಮ ನಮನ “ವಿನಯವಾಣಿ” ಬಳಗದಿಂದ ಭಾವಪೂರ್ಣ ‌ಶ್ರದ್ಧಾಂಜಲಿ ಸಮರ್ಪಣೆ.💐💐👏

ಮಲ್ಲಿಕಾರ್ಜುನ ‌ಮುದನೂರ.

ಸಂಪಾದಕರು. ವಿನಯವಾಣಿ.

Related Articles

Leave a Reply

Your email address will not be published. Required fields are marked *

Back to top button