ಪ್ರಮುಖ ಸುದ್ದಿ
ಪ್ರಕಾಶ್ ರೈ ಪರ ಸಂಡೇ ಲಾಯರ್ ; just askingಗೆ ಪ್ರತಾಪ್ ಸಿಂಹ simple answer!
ಬಹುಭಾಷಾ ನಟ ಪ್ರಕಾಶ್ ರೈ ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು
ಮೈಸೂರು : ಮೈಸೂರು ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮತ್ತು ಫೇಸ್ಬುಕ್ ಗಳಲ್ಲಿ ನನ್ನ ವಿರುದ್ಧ ಟ್ರೋಲ್ ಮಾಡಿ ತೇಜೋವಧೆ ಮಾಡಿದ್ದಾರೆ. ನನ್ನ ಮಗನ ಸಾವಿನ ಅಣಕ ಮಾಡಲಾಗಿದ್ದು ನನಗೆ ತಮಿಳುನಾಡಿಗೆ ಹೋಗುವಂತೆ ಹೇಳುವ ಮೂಲಕ ಟ್ರೋಲ್ ಗುಂಡಾಗಿರಿ ಮಾಡಿದ್ದಾರೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಆರೋಪಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಾಪ್ ಸಿಂಹಗೆ ಲಾಯರ್ ನೋಟಿಸ್ ನೀಡಿದ್ದು just asking ಹೆಸರಿನಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿಕೊಂಡಿದ್ದಾರೆ.
ಆದರೆ, ಪ್ರಕಾಶ್ ರೈ ಅವರ just asking ಪ್ರತಿಭಟನೆ ಬಗ್ಗೆ ಪ್ರಶ್ನಿಸಿದಾಗ ಮೈಸೂರು ಸಂಸದ ಪ್ರತಾಪ ಸಿಂಹ simple answer ನೀಡಿದ್ದಾರೆ. ಅಸಲಿಗೆ ನಾನು ಟ್ವಿಟರ್ ಮತ್ತು ಫೇಸ್ಬುಕ್ ಗಳಲ್ಲಿ ಪ್ರಕಾಶ್ ರೈ ಹೇಳಿದ ಹಾಗೆ ಟ್ರೋಲ್ ಮಾಡೇ ಇಲ್ಲ. ವೆಬ್ ಸೈಟ್ ಒಂದು ಪ್ರಕಟಸಿದ್ದ ಸುದ್ದಿಯನ್ನು ರೀಟ್ವೀಟ್ ಮಾಡಿದ್ದೇನೆ. ಹೀಗಾಗಿ, ಪ್ರಕಾಶ್ ರೈ ಪರ ವಕೀಲ ಸಂಡೇ ಲಾಯರ್ ಇರಬೇಕು. ಅವರು ಮೊದಲು ಟ್ವಿಟರ್ ಹಾಗೂ ರೀಟ್ವಿಟ್ ಬಗ್ಗೆ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.