ನೀತಿ ಸಂಹಿತೆ ಉಲ್ಲಂಘನೆ ಮಾಡಿಲ್ಲಃ ಶಾಸಕ ನಡಹಳ್ಳಿ
ದಾಳಿ ಹಿಂದೆ ಸ್ಥಳೀಯರ ಕೈವಾಡ ನಡಹಳ್ಳಿ ಆರೋಪ
ಮುದ್ದೇಬಿಹಾಳ: ಪಟ್ಟಣದಲ್ಲಿ ನಿನ್ನೆ ದಿವಸ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಯಾದ ಕೆಲವೇ ಕ್ಷಣದಲ್ಲಿ ನನ್ನ ಮನೆಯ ಮೇಲೆ ಸ್ಥಳೀಯ ತಾಲೂಕು ಆಡಳಿತ ಅಧಿಕಾರಿಗಳು ದಿಢೀರನೆ ನನ್ನ ಮನೆಯ ಮೇಲೆ ದಾಳಿ ಮಾಡಿದ್ದರ ಹಿಂದೆ ಸ್ಥಳೀಯ ನಾಯಕರ ಕೈವಾಡ ಇದೆ ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್ ಪಾಟೀಲ (ನಡಹಳ್ಳಿ) ಆರೋಪಿಸಿದ್ದಾರೆ.
ಬುಧವಾರ ತಮ್ಮ ಮನೆಯಲ್ಲಿ ಆಯೋಜಿಸಿದ್ದ 5 ದಿನಗಳ ಪೂಜಾ ಕಾರ್ಯಕ್ರಮದ ಕೊನೆಯ ಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬ ಏರ್ಪಡಿಸಿದ್ದ ಲಕ್ಷ್ಮೀದೇವಿ ಕುಂಕುಮಾಚರಣಾ ಪೂಜಾ ಕಾರ್ಯಕ್ರಮವು ನೀತಿ ಸಂಹಿತೆಗೂ ಮುನ್ನವೇ ನೆಡೆಯುತ್ತಿದೆ. ಕೊನೆಯ ಎರಡು ದಿನದಲ್ಲಿ ಚುನಾವಣೆ ಸಂಹಿತಿ ಜಾರಿಯಾದರೆ ನಮ್ಮ ಕುಟುಂಬದವರು ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಬೇಕೇ..? ಅದರಲ್ಲೂ ಸಂಹಿತೆ ಜಾರಿಯಾಗಿ ಕೆಲವೇ ಕ್ಷಣದಲ್ಲಿ ನನ್ನ ಮನೆಯ ಮೇಲೆಯೆ ಅಧಿಕಾರಿಗಳು ದಾಳಿ ನೆಡೆಸುತ್ತಾರೆ ಎಂದರೆ ಇದು ನನ್ನ ಎದುರಾಳಿಗಳಲ್ಲಿ ನನ್ನ ಹಾಗೂ ನನ್ನ ಬೆಂಬಲಿಗರಿಂದ ಹುಟ್ಟಿಕೊಂಡಿರುವ ಚುನಾವಣಾ ಸೋಲಿನ ಭೀತಿ ಎಂದು ಅವರು ಹೇಳಿದರು.
ನಮ್ಮ ಮನೆಯ ಮೇಲೆ ದಾಳಿ ನೆಡೆಸಿ ಪೂಜಾ ಕಾರ್ಯಕ್ರಮವನ್ನು ಭಂಗಗೊಳಿಸುವಂತೆ ಸ್ಥಳೀಯ ನಾಯಕ ಅವರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಿಂದಲೆ ವರ್ಗಾವಣೆಗೊಂಡಿದ್ದರೂ ಸ್ಥಳೀಯ ತಹಸೀಲ್ದಾರ ಸ್ಥಳೀಯ ಮಟ್ಟದಲ್ಲಿ ಅಧಿಕಾರ ಇಲ್ಲದಿದ್ದರೂ ನಮ್ಮ ಮನೆ ಮೇಲೆ ದಾಳಿ ನೆಡೆಸಿದ್ದಾರೆ.
ಇದೇ ರೀತಿಯೇ ಕಳೆದ 25 ವರ್ಷಗಳಿಂದ ಮುದ್ದೇಬಿಹಾಳ ಕ್ಷೇತ್ರದ ಜನರು ನರಕಯಾತ್ರೆ ಅನುಭವಿಸುತ್ತಿದ್ದಾರೆ. ಆದರೆ ನಾನು ಇಂತಹ ನಡೆತೆಗೆ ಬಗ್ಗುವುದಿಲ್ಲ ಎಂಬುವುದು ನನ್ನ ವಿರೋಧಿಗಳಿಗೆ ಈ ಘಟನೆಯಿಂದಲೇ ತಿಳಿಯಲಿ ಎಂದು ಅವರು ಹೇಳಿದರು.
ಮಂಗಳವಾರ ಬೆಳಿಗ್ಗೆಯಿಂದಲೇ ನಾಮ್ಮ ಕುಟುಂಬವು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದೇವು. ಎಂದಿನಂತೆ ನಾಲ್ಕನೆಯ ದಿನವೂ ಮನಗೆ ಸುಮಾರು 10 ಸಾವಿರ ಜನರು ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಆದರೆ ನೀತಿ ಸಂಹಿತೆ ಜಾರಿಯಾದ ಕೆಲವೇ ಕ್ಷಣದಲ್ಲಿ ತಹಸೀಲ್ದಾರರು ಹಾಗೂ ಪೊಲೀಸರು ಧಾರ್ಮಿಕ ಕಾರ್ಯಕ್ರಮ ನೆಡೆಯುತ್ತಿದ್ದರೂ ಬೂಟ್ ಕಾಲಿನಿಂದಲೇ ಪೂಜೆ ನೆಡೆಯುವ ಸ್ಥಳಕ್ಕೆ ಆಗಮಿಸಿ ನಮ್ಮ ಕುಟುಂಬದ ಧಾರ್ಮಿಕ ಪದ್ಧತಿಗೆ ಅಡ್ಡಿಯಾದರು.
ಆದರೂ ಅವರಿಗೆ ಮೂರು ಗಂಟೆಗಳ ಕಾಲ ಸಮಯ ಕೇಳಿ ನಂತರ ಪೂಜೆ ಆಗಮಿಸಿದ್ದ ಎಲ್ಲ ಜನರನ್ನು ಮನವೊಲಿಸಿ ಮರಳಿ ಕಳುಹಿಸಿದೆವು. ನಾನು ಹಾಗೂ ನನ್ನ ಕುಟುಂಬದವರು ಕಾನೂನಿನ ವಿರೋಧವಾದ ಕೆಲಸ ಮಾಡಿಲ್ಲ.
ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಂತಹ ಮುತ್ತೈದೆಯರಿಗೆ ಕಡ್ಡಾಯವಾಗಿ ಸೀರೆ ನೀಡುವುದು ಹಿಂದೂ ಧರ್ಮದಲ್ಲಿ ಪಾಲನೆ ಇದೆ. ತಹಸೀಲ್ದಾರ ಅವರು ದಾಳಿ ಮಾಡಿದ ವೇಳೆಯಲ್ಲಿ ಆ ಸೀರೆಗಳೆ ಸಿಕ್ಕಿವೆ. ಇದು ಬಿಟ್ಟರೆ ಬೇರೇನೂ ಸಿಕ್ಕಿಲ್ಲ ಎಂದು ಅವರು ಸ್ಪಷ್ಠಪಡಿಸಿದರು.
ವರ್ಗಾವಣೆಯಾಗಿದ್ದರೂ ದಾಳಿಯಲ್ಲಿ ಭಾಗಿಯಾದ ತಹಸೀಲ್ದಾರ:
ಸ್ಥಳೀಯ ತಹಸೀಲ್ದಾರ ಎಂಎಎಸ್ ಬಾಗವಾನ ಅವರಿಗೆ ಈಗಾಗಲೇ ಬೇರೆ ಕಡೆಗೆ ವರ್ಗಾವಣೆಯಾಗಿದ್ದರೂ ಯಾವ ಅಧಿಕಾರದಲ್ಲಿ ನಮ್ಮ ಮನೆಗೆ ಬಂದು ದಾಳಿ ನೆಡೆಸಿದ್ದಾರೆ ಎಂಬುವುದು ಇಲ್ಲಿಯವರೆಗೂ ನನಗೆ ತಿಳಿದು ಬಂದಿಲ್ಲ.
ಇವರಿಗೆ ಸ್ಥಳೀಯ ಶಾಸಕರ ಬೆಂಬಲ ಇದೆ ಎಂಬುವುದು ಮೇಲ್ನೊಟಕ್ಕೆ ಕಂಡು ಬರುತ್ತದೆ ಎಂದು ತಿಳಿಸಿದರು.