24 ಗಂಟೆಯಲ್ಲಿ 48 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢ
ನವದೆಹಲಿಃ ಜುಲೈ.26ಃ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ನಿತ್ಯ ದಾಖಲೆಯ ಏರಿಕೆ ಕಂಡು ಬರುತ್ತಿದೆ. ಭಾರತದಲ್ಲಿ ಒಂದೇ ದಿನ ಕಳೆದ 24 ಗಂಟೆಯಲ್ಲಿ 48,000 ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿರುವದು ಒಂದಡೆ ಆತಂಕ ಹೆಚ್ಚಿಸಿದರೆ, ಇನ್ನೊಂದಡೆ ಸಿಹಿ ಸುದ್ದಿ ತಿಳಿಸಿದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರಅದೇ 24 ಗಂಟೆಗಳಲ್ಲಿ ಅತಿ ಹೆಚ್ಚು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಹೋಗಿದ್ದಾರೆ ಎಂದು ತಿಳಿಸುತ್ತಿದೆ.
ದೇಶದಲ್ಲಿ ಈವರೆಗೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 8,85,577 ಆಗಿದೆ. ಒಟ್ಟು ಗುಣಮುಖ ಹೊಂದಿದವರು ಶೇ.63.92 ರಷ್ಟಾಗಿದೆ. ಜೊತೆಯಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ 48,661 ಮಂದಿಗೆ ಸೋಂಕು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 13,85,522 ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 705 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ 32,062 ಕ್ಕೆ ಏರಿದರೆ, 8,85,577 ಮಂದಿ ಗುಣಮುಖರಾಗಿದ್ದಾರೆ.
4,67,882 ಮಂದಿಗೆ ನಿಗದಿತ ಆಸ್ಪತ್ರೆಗಳಲ್ಲ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ 3,62,152 ಜನರನ್ನು ಸಕಾರಿ ಪ್ರಯೋಗಾಲಯಗಳಲ್ಲಿ ಕೊರೊನಾ ವೈರಸ್ ಕುರಿತು ತಪಾಸಣೆಗೆ ಒಳಪಡಿಸಲಾಗಿದೆ. ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 79,8,78 ಜನರಿಗೆ ಕೋವಿಡ್-19 ತಪಾಸಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.