ಶೈಕ್ಷಣಿಕ ಅಭೀವೃದ್ಧಿಗಾಗಿ ಸಂಘ ಶ್ರಮಿಸಲಿದೆ- ವಿಶಾಲ್ ಶಿಂಧೆ
ದೋರನಹಳ್ಳಿಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಅಸ್ತಿತ್ವ

ದೋರನಹಳ್ಳಿಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಅಸ್ತಿತ್ವ
ಶೈಕ್ಷಣಿಕ ಅಭೀವೃದ್ಧಿಗಾಗಿ ಸಂಘ ಶ್ರಮಿಸಲಿದೆ- ವಿಶಾಲ್ ಶಿಂಧೆ
ಶಹಾಪುರ, ಯಾದಗಿರಿಃ ಶೈಕ್ಷಣಿಕವಾಗಿ ಅತಿ ಹೆಚ್ಚು ಸಮಸ್ಯೆಗಳನ್ನು ನಮ್ಮ ಗ್ರಾಮ ಎದುರಿಸುತ್ತಿದ್ದು ಅವುಗಳ ಪರಿಹಾರದ ನಿಟ್ಟಿನಲ್ಲಿ ಕೆಲಸ ಮಾಡಲು ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯ ವಿಶಾಲ ಕುಮಾರ ಶಿಂಧೆ ತಿಳಿಸಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಸರ್ಕಾರಿ ಪ್ರೌಢಶಾಲೆ ದೋರನಹಳ್ಳಿಯ ಹಳೆ ವಿದ್ಯಾರ್ಥಿಗಳು ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮದು ದೊಡ್ಡಗ್ರಾಮವಾಗಿದ್ದು ಇಲ್ಲಿ ಐದಾರು ಪ್ರಾಥಮಿಕ ಶಾಲೆ ಒಂದು ಸರ್ಕಾರಿ ಪ್ರೌಢಶಾಲೆ ಇದೆ ಆದರೆ ಇಲ್ಲಿ ಹಲವಾರು ಸಮಸ್ಯೆಗಳು ಇದ್ದು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆಗೆ ನಾವು ಮುಂದಾಗಿದ್ದೇವೆ.
ಶಾಲೆಯಲ್ಲಿ ಕೊಠಡಿ, ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಶೈಕ್ಷಣಿಕವಾಗಿ ಭವಿಷ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಸಂಘ ಕೆಲಸ ಮಾಡುತ್ತದೆ. ಇಲ್ಲಿ ಜಾತಿ, ಮತ , ಪಂಥ, ಧರ್ಮ, ರಾಜಕೀಯ ಪಕ್ಷಗಳಿಗೆ ಪ್ರವೇಶವಿಲ್ಲ. ಇದು ಪಕ್ಷಾತೀತವಾಗಿ ಗ್ರಾಮದ ಶೈಕ್ಷಣಿಕ ಅಭೀವೃದ್ದಿಗೆ ಮಾತ್ರ ಶ್ರಮಿಸಲಿದೆ.
ಸಂಘವನ್ನು ಅಧಿಕೃತವಾಗಿ ನೋಂದಣಿ ಮಾಡಿ ಆ ಮೂಲಕ ಹಳೆ ವಿದ್ಯಾರ್ಥಿಗಳಿಗೆ ಸದಸ್ಯತ್ವ ನೀಡಿ ಸಂಘದ ಅಭಿವೃದ್ಧಿ ಮತ್ತು ಅದರ ಕಾರ್ಯವ್ಯಾಪ್ತಿಗೆ ತರಲಾಗುತ್ತದೆ.
ಗ್ರಾಮದಲ್ಲಿ ಶೈಕ್ಷಣಿಕವಾಗಿ ಉತ್ತಮವಾದ ಸೇವೆ ಸಲ್ಲಿಸಿದ ಶಿಕ್ಷಕರನ್ನು ಈ ಸಂಘದ ಮೂಲಕ ಗೌರವಿಸುವ ಕಾರ್ಯವು ನಡೆಯಲಿದೆ. ಅದರಂತೆ ಆರಂಭದಲ್ಲಿ ನಮ್ಮ ಶಾಲೆಯಲ್ಲಿ 21 ವರ್ಷ ಸುದೀರ್ಘ ಸೇವೆ ನೀಡಿ ಅಕ್ಷರ ದಾಸೋಹ ಅಧಿಕಾರಿಯಾಗಿ ನಿವೃತ್ತರಾದ ಮಲ್ಲಣ್ಣಗೌಡ ಎಂ. ಬಿರಾದಾರ ಅವರನ್ನು ಜೂನ್ 28 ರಂದು ವಿಶೇಷವಾಗಿ ಸನ್ಮಾನಿಸುವ ಮೂಲಕ ಸಂಘದ ಮೊದಲ ಚಟುವಟಿಕೆ ಆರಂಭವಾಗಲಿದೆ. ಅಂದಿನ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ಗುಂಡಣ್ಣ ಡಿಗ್ಗಿ ಸೇರಿದಂತೆ ಸ್ವಾಮೀಜಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಬದಲ್ಲಿ ಮಹಾಂತೇಶ ನೀಲಂಕಾರ, ಅಮರೇಶ ಗೋಲಗೇರಿ, ಹಯ್ಯಾಳಪ್ಪ ಗುಂಟನೂರ್, ಖಂಡಪ್ಪ ಅಗಸಿ, ಆನಂದ ನಾಶಿ, ಮಂಜುನಾಥ ಕಂಚಗಾರ, ಗಣಪತಿ ಬಂಟನೂರ, ಶರಣು ಕಂಬಾರ, ಪರಪ್ಪ ಮಲಗೊಂಡ, ಈರಣ್ಣ ಕಸನ್ , ಮಹೇಶ ಪತ್ತಾರ, ಚಿದಾನಂದ ತಳವಾರ, ದಶವಂತ ದೊರೆ, ಗಣಪತಿ ನಾಲವಾರ, ಮಲ್ಲರಡ್ಡಿ ದೊರೆ, ಭೀಮ ಆಂದೇಲಿ, ಮರಿಲಿಂಗ ಕೌದಿ, ಸೇರಿದಂತೆ ಇತರರಿದ್ದರು.