ಪ್ರಮುಖ ಸುದ್ದಿ
ಎರಡು ಕುಟುಂಬ ನಡುವೆ ಬಡಿಗೆಯಿಂದ ಮಾರಮಾರಿಃ ಐವರು ಆಸ್ಪತ್ರೆಗೆ ದಾಖಲು
ಎರಡು ಕುಟುಂಬ ಮಧ್ಯ ಮಾರಮಾರಿ
ಇಬ್ಬರ ಬಂಧನ, ಐವರು ಆಸ್ಪತ್ರೆಗೆ ದಾಖಲು
ಯಾದಗಿರಿಃ ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಬಡಿಗೆಯಿಂದ ಮಾರಾಮಾರಿ ನಡೆದಿದ್ದು ಘಟನೆಯಲ್ಲಿ ಹಲವರ ಗಾಯಗೊಂಡ ಘಟನೆ ಜಿಲ್ಲೆಯ ವಡಗೇರಿ ತಾಲೂಕಿನ ಹಾಲಗೇರಾ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಹಾಲಗೇರಾ ಗ್ರಾಮದ ಯಲ್ಲಮ್ಮ ದೇವಿಯ ದರ್ಶನಕ್ಕೆ ಬಂದ ವೇಳೆ ಕುಟುಂಬಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ.
ಮಾರಾಮಾರಿಯಲ್ಲಿ ಐದು ಮಂದಿ ಗಾಯಗೊಂಡಿದ್ದು ಯಾದಗಿರಿ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ವಡಗೇರಾ ಪೊಲೀಸರು ಭೇಟಿ ನೀಡಿದ್ದು,ಎರಡು ಕುಟುಂಬದ ತಲಾ ಒಬ್ಬರನ್ನು ಬಂಧಿಸಿದ್ದಾರೆ.
ಚಂದ್ರಪ್ಪ ಹಾಗೂ ಹನುಮಂತ ಎಂಬುವರೇ ಬಂಧಿತರಾಗಿದ್ದಾರೆ.
ಈ ಕುರಿತು ವಡಿಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರಾಮಾರಿ ಮಾಡಿಕೊಂಡ ಎರಡು ಕುಟುಂಬಗಳು ವಡಗೇರ ತಾಲೂಕಿನ ಹೊರಟೂರ ಗ್ರಾಮದವರು ಎಂದು ತಿಳಿದು ಬಂದಿದೆ.