ಪ್ರಮುಖ ಸುದ್ದಿ
ರಾಜಕೀಯ ನಿವೃತ್ತಿ ಘೋಷಿಸುತ್ತೇನೆ-ಎಸ್.ಟಿ.ಸೋಮಶೇಖರ
ರಾಜಕೀಯ ನಿವೃತ್ತಿ ಘೋಷಣೆ- ಎಸ್.ಟಿ.ಸೋಮಶೇಖರ್
ಬೆಂಗಳೂರಃ ನಾವು ಸ್ವಂತ ನಿರ್ಧಾರದ ಮೇಲೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದೆವು. ಆದರೆ ಸ್ಪೀಕರ್ ರಮೇಶಕುಮಾರ ಅವರು ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಮಣಿದು ಅನರ್ಹಗೊಳಿಸಿದ್ದಾರೆ ಎಂದು ಅನರ್ಹ ಶಾಸಕ ಎಸ್.ಟಿ.ಸೋಮಶೇಖರ ಕಿಡಿಕಾರಿದ್ದಾರೆ.
ಕ್ಷೇತ್ರಕ್ಕೆ ಆಗಮಿಸಿದ್ದ ಅವರು, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ನಾವೇನು ನಮ್ಮ ಕುಟುಂಬ ಅಭಿವೃದ್ಧಿಗಾಗಿ ರಾಜೀನಾಮೆ ಸಲ್ಲಿಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜಿನಾಮೆ ನೀಡಿದ್ದೇವೆ. ಯಾರ ಒತ್ತಡವು ನಮಗಿಲ್ಲ.
ಸ್ಪೀಕರ್ ಅವರು ಅನರ್ಹಗೊಳಿಸಲಿದ್ದಾರೆ ಎಂಬುದು ನಮಗೆ ಮೊದಲೇ ತಿಳಿದಿತ್ತು. ಕಾಂಗ್ರೆಸ್ ನಾಯಕರು ಅಭೆ ಅನರ್ಹಗೊಳಿಸುವ ನಿರ್ಧಾರ ಮಾಡಿದ್ದಾರೆ ಎಂಬುದು ನಮಗೆಲ್ಲ ಗೊತ್ತಿತ್ತು.
ನಮ್ಮ ಮೇಲೆ ಭರವಸೆ ಇಟ್ಟು ನಮ್ಮನ್ನು ಗೆಲ್ಲಿಸಿದ ಜನರ ಕೆಲಸ ಮಾಡಲು ಆಗುವದಿಲ್ಲ. ಅಂದ ಮೇಲೆ ಏನ್ಮಾಡೋದು ರಾಜಿನಾಮೆ ಅನಿವಾರ್ಯ.
ಅಲ್ಲದೆ ಇನ್ನೂ ಎರಡು ದಿನದಲ್ಲಿ ಕ್ಷೇತ್ರದ ಜನತೆಯೊಂದಿಗೆ ಚರ್ಚಿಸಿ ರಾಜಕೀಯ ನಿವೃತ್ತಿ ಪಡೆಯಲಿದ್ದೇನೆ ಎಂದು ಅವರು ತಿಳಿಸಿದರು.




