
ಡಾ.ಅಂಬೇಡ್ಕರ ಭಾರತದ ದೇವರು- ಪಾಟೀಲ್
yadgiri, ಶಹಾಪುರಃ ಅಸ್ಪøಶ್ಯತೆ ಪಿಡುಗು, ಅಸಮಾನತೆ, ಅವಮಾನ ಸಾಕಷ್ಟು ಕಷ್ಟ ನಷ್ಟ ಸಂಕಷ್ಟಗಳನ್ನು ಎದುರಿಸಿ ತನಗಾದಂತೆ ಬೇರೆ ಯಾವ ಪ್ರಜೆಗೂ ಅಂತಹ ಸಂಕೋಲೆ ಬಾರದಿರಲಿ ಎಂಬ ಸದುದ್ದೇಶದಿಂದ ಪ್ರತಿ ಪ್ರಜೆಗೂ ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆ ಗೌರವಾದಾರದಿಂದ ಬದಕಲು ಅವಕಾಶವನ್ನು ಕಲ್ಪಿಸಿದ ಮಹಾನ್ ಮಾನವತಾವಾದಿ ನಮ್ಮ ಪಾಲಿನ ದೇವರು ಡಾ.ಅಂಬೇಡ್ಕರರು ಎಂದು ಮುಖಂಡ ಶಂಕರಗೌಡ ಮಾಲಿ ಪಾಟೀಲ್ ಹೇಳಿದರು.
ತಾಲೂಕಿನ ದಿಗ್ಗಿ ಗ್ರಾಮದ ಅಂಬೇಡ್ಕರ್ ಭವನದ ಆವರಣದಲ್ಲಿ 131 ನೇ ಡಾ.ಅಂಬೇಡ್ಕರರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸಂವಿಧಾನ ಬಾಬಾ ಸಾಹೇಬರು ರಚನೆ ಮಾಡದಿದ್ದರೆ, ನಮಗೆಲ್ಲ ಈ ಪ್ರಮಾಣದಲ್ಲಿ ಸ್ವಾತಂತ್ರ್ಯ ದೊರೆಯುತ್ತಿರಲಿಲ್ಲ. ಮಹಿಳೆಯರು, ಕಾರ್ಮಿಕರು, ವಯಸ್ಕರರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಸಮಾನ ಅವಕಾಶವನ್ನು ಅವರು ಕಾನೂನಾತ್ಮಕವಾಗಿ ಕಲ್ಪಿಸಿದ್ದಾರೆ. ಅವರ ಅಗಾಧ ಜ್ಞಾನವನ್ನು ಕಂಡು ವಿಶ್ವವೇ ಆಶ್ಚರ್ಯಚಕಿತರಾಗಿದ್ದಾರೆ.
ಇಂದು ಅವರು ಜನ್ಮ ದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು. ಅಧ್ಯಕ್ಷತೆವಹಿಸಿದ್ದ ಗುರು ಸಂಗಪ್ಪ ಪೂಜಾರಿ ಮಾತನಾಡಿದರು, ಈ ಸಂದರ್ಭದಲ್ಲಿ ದೇವೇಗೌಡ ಹಾಳಭಾವಿ, ಅಶೋಕ ಪ್ಯಾಟಿ, ಸಂಗನಬಸಪ್ಪ ಹಾದಿಮನಿ, ಮಹಾಂತೇಶ ದೊಡ್ಡಮನಿ, ಅಂಬ್ಲಪ್ಪ ಮ್ಯಾಗಿನಮನಿ, ರಾಮಚಂದ್ರಪ್ಪ ಮರಕಲ್, ಧರ್ಮಣ್ಣ ನಾಯ್ಕೋಡಿ, ಸಂಗಪ್ಪ ಮ್ಯಾಗಿನಮನಿ, ಅಂಬ್ಲಪ್ಪ ಹಳಿಮನಿ ಇದ್ದರು, ಗ್ರಾಮಸ್ಥರು ಭಾಗವಹಿಸಿದ್ದರು. ರಘುಕುಮಾರ್ ದೊಡ್ಮನಿ ನಿರೂಪಿಸಿದರು, ಚನ್ನಬಸಪ್ಪ ಬಿ.ದೊಡ್ಮನಿ ಸ್ವಾಗತಿಸಿದರು. ಚನ್ನಬಸಪ್ಪ ಕಾಡಂಗೇರಿ ವಂದಿಸಿದರು.